ಸ್ವಿಸ್ ಮಹಿಳೆ ಮೇಲೆ ಅತ್ಯಾಚಾರ: 6 ಆರೋಪಿಗಳಿಗೆ ಜೀವಾವಧಿ
ದಾತಿಯಾ , ಭಾನುವಾರ, 21 ಜುಲೈ 2013 (10:24 IST)
39
ವರ್ಷ ವಯಸ್ಸಿನ ಸ್ವಿಸ್ ಪ್ರವಾಸಿ ಮೇಲೆ ಮಾರ್ಚ್ 15ರಂದು ಸಾಮೂಹಿಕ ಅತ್ಯಾಚಾರ ಮಾಡಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ತ್ವರಿತ ಗತಿ ನ್ಯಾಯಾಲಯ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಶನಿವಾರ ವಿಧಿಸಿದೆ. ಐವರು ಅಪರಾಧಿಗಳಾದ ಬಾಬಾ, ಭೂತಾ, ರಾಂಪ್ರೋ, ಗಾಜಾ ಅಲಿಯಾಸ್ ಬ್ರಜೇಶ್ ಮತ್ತು ವಿಷ್ಣುಕಂಜಾರ್ ಅವರಿಗೆ ಅತ್ಯಾಚಾರದ ಆರೋಪದ ಮೇಲೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದರೆ, 6ನೇ ಆರೋಪಿ ನಿತಿನ್ ಕಂಜಾರ್ ದರೋಡೆಗೆ ಸಂಬಂಧಿಸಿ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ನೀಡಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.ಆಗ್ರಾದಲ್ಲಿ ಬೈಸಿಕಲ್ ಪ್ರವಾಸ ಕೈಗೊಂಡಿದ್ದ ಸ್ವಿಸ್ ದಂಪತಿ ರಾತ್ರಿ ಬಿಡಾರ ಹೂಡಿದ್ದಾಗ, ಸ್ವಿಸ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಅವಳ ಸಂಗಾತಿಯನ್ನು ದರೋಡೆ ಮಾಡಲಾಗಿತ್ತು