Publish Date: Sat, 26 Apr 2008 (12:30 IST)
Updated Date: Sat, 26 Apr 2008 (12:29 IST)
ಕರ್ನಾಟಕ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆಗಳಿಗಾಗಿ ಚುನಾವಣಾ ಆಯೋಗವು ಶನಿವಾರ ಅಧಿಸೂಚನೆ ಹೊರಡಿಸಿದೆ.
ಮೇ 22ರಂದು ನಡೆಯಲಿರುವ ತೃತೀಯ ಹಾಗೂ ಅಂತಿಮ ಸುತ್ತಿನ ಈ ಮತದಾನದಲ್ಲಿ 69 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಅಂತಿಮ ಸುತ್ತಿನ ಚುನಾವಣಾ ಸ್ಫರ್ಧೆಗೆ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನಾಂಕವಾಗಿದೆ. ಮೇ 5ರಂದು ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರಗಳ ಹಿಂತೆಗೆತಕ್ಕೆ ಮೇ 7 ಕೊನೆಯ ದಿನವಾಗಿದೆ.
ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ಬೀದರ್, ಗದಗ್, ಧಾರವಾಡ ಮತ್ತು ಹಾವೇರಿಯಲ್ಲಿ ಮತದಾನ ನಡೆಯಲಿದೆ.
ವಿಧಾನ ಸಭೆಯ 224 ಸ್ಥಾನಗಳಿಗೆ ಮೇ 10, 16 ಮತ್ತು 22ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 25ರಂದು ಮತ ಎಣಿಕೆ ನಡೆಯಲಿದೆ.