Miscellaneous Recipe Sweets 0908 08 1090808063_1.htm

Select Your Language

Notifications

webdunia
webdunia
webdunia
webdunia

ಸೆವೆನ್ ಕಪ್ ಕೇಕ್

ಸೆವೆನ್ ಕಪ್ ಕೇಕ್
ಬೇಕಾಗುವ ಸಾಮಗ್ರಿ- ಒಂದು ಕಪ್ ಕಡ್ಲೆ ಹಿಟ್ಟು, ಮೂರು ಕಪ್ ಸಕ್ಕರೆ, ಒಂದು ಕಪ್ ಹಾಲು, ಒಂದು ಕಪ್ ತುಪ್ಪ, ಒಂದು ಕಪ್ ತೆಂಗಿನಕಾಯಿ ತುರಿ.

ಮಾಡುವ ವಿಧಾನ- ಕಡಲೆ ಹಿಟ್ಟನ್ನು ಹಾಗೆಯೇ ಸ್ವಲ್ಪ ಹೊತ್ತು ಏನೂ ಹಾಕದೆ ಫ್ರೈ ಮಾಡಿ ಪಕ್ಕದಲ್ಲಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ, ಸಕ್ಕರೆ, ಹಾಲು, ರುಬ್ಬಿದ ತೆಂಗಿನ ಕಾಯಿ ತುರಿಯನ್ನು ಮಿಕ್ಸ್ ಮಾಡಿ ಒಲೆಯಲ್ಲಿಡಿ. ಸ್ವಲ್ಪ ಹೊತ್ತಿನ ನಂತರ ತುಪ್ಪ ಚೆನ್ನಾಗಿ ಕರಗಿ ಮಿಕ್ಸ್ ಆದ ಮೇಲೆ ಅದಕ್ಕೆ ಫ್ರೈ ಮಾಡಿದ ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಕಲಸುತ್ತಾ ಇರಿ. ಇದನ್ನು ಮಾಡುವಾಗ ಒಲೆಯನ್ನು ಹದ ಉರಿಯಲ್ಲಿಡೋದು ಒಳ್ಳೆಯದು. ಈ ಮಿಶ್ರಣ ಕೊಂಚ ದಪ್ಪಗಾಗಾಗುತ್ತಾ, ತುಪ್ಪ ಪ್ರತ್ಯೇಕವಾಗಿ ಕಾಣುತ್ತಾ ಇರುವಾಗ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಹರವಿ. ಬೇಕಾದ ಆಕಾರಕ್ಕೆ ಕತ್ತರಿಸಿ ತಣಿದ ಮೇಲೆ ಫ್ರಿಡ್ಜ್‌ನಲ್ಲಿಡಿ. ಬೇಕಾದರೆ, ತೆಳುವಾಗಿ ಕತ್ತರಿಸಿದ ಬಾದಾಮಿಯಿಂದ ಅಲಂಕರಿಸಿ.

Share this Story:

Follow Webdunia kannada