Miscellaneous Recipe Sweets 0908 01 1090801104_1.htm

Select Your Language

Notifications

webdunia
webdunia
webdunia
webdunia

ಹಣ್ಣುಗಳ ಹಲ್ವಾ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- 10 ಖರ್ಜೂರ, 50 ಗ್ರಾಂ ಒಣ ದ್ರಾಕ್ಷಿ, ಕಾಲು ಕಪ್ ಹಾಲು, ನಾಲ್ಕು ಬಾಳೆಹಣ್ಣು, 20 ಗೋಡಂಬಿ, 10 ಬಾದಾಮಿ, ಕಾಲು ಕಪ್ ಸಕ್ಕರೆ, ಅರ್ಧ ಕಪ್ ನೀರು, ಅರ್ಧ ಕಪ್ ತೆಂಗಿನಕಾಯಿ ಹಾಲು, ಅರ್ಧ ಚಮಚ ಕೇಸರಿ, ಅರ್ಧ ಕಪ್ ತುಪ್ಪ, ಒಂದು ಚಮಚ ರೋಸ್ ವಾಟರ್, ಎರಡು ಚಮಚ ಜೇನುತುಪ್ಪ.

ಮಾಡುವ ವಿಧಾನ- ಒಣದ್ರಾಕ್ಷಿ ಹಾಗೂ ಖರ್ಜೂರಕ್ಕೆ ಸ್ವಲ್ಪ ಹಾಲು ಹಾಕಿ ರುಬ್ಬಿ. ಬಾಳೆಹಣ್ಣನ್ನು ಕಿವುಚಿಡಿ. ಗೋಡಂಬಿ ಹಾಗೂ ಸಿಪ್ಪೆ ಸುಲಿದ ಬಾದಾಮಿಯನ್ನು ರುಬ್ಬಿ. ಒಲೆಯ ಮೇಲೆ ನೀರು ಹಾಗೂ ಸಕ್ಕರೆ ಹಾಕಿ ನೂಲಿನಂತೆ ಸಕ್ಕರೆ ಪಾಕ ತಯಾರಿಸಿ. ಇದಕ್ಕೆ ಕಿವುಚಿಟ್ಟ ಬಾಳೆಹಣ್ಣು, ತೆಂಗಿನಕಾಯಿ ಹಾಲು ಹಾಗೂ ರುಬ್ಬಿದ ಗೋಡಂಬಿ ಸೇರಿಸಿ. ನಂತರ ಖರ್ಜೂರ ಹಾಗೂ ಒಣದ್ರಾಕ್ಷಿ ರುಬ್ಬಿದ್ದನ್ನೂ ಇದಕ್ಕೆ ಸೇರಿಸಿ. ನಂತರ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸುತ್ತಾ ಬನ್ನಿ. ನಂತರ ಕತ್ತರಿಸಿದ ಬಾದಾಮಿ ಚೂರು, ಕೇಸರಿ ಹಾಗೂ ರೋಸ್ ವಾಟರ್ ಸೇರಿಸಿ. ನೀರಿನಂಶ ಒಣಗುತ್ತಾ ಬಂದ ಮೇಲೆ ಒಲೆಯಿಂದ ಕೆಳಗಿಳಿಸಿ. ಅದಕ್ಕೆ ಜೇನುತುಪ್ಪ ಸೇರಿಸಿ ತಿರುವಿ. ನಂತರ ಇದನ್ನು ಪ್ಲೇಟ್‌ಗೆ ಸುರುವಿ, ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada