ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಕ್ಯಾರೆಟ್ ತುರಿ
ಮೂರು ಕಪ್ ಹಾಲು
ಸಕ್ಕರೆ
ಏಲಕ್ಕಿ ಪುಡಿ
ತುಪ್ಪ
ಪಾಕ ವಿಧಾನ:
ತುರಿದ ಕ್ಯಾರೆಟನ್ನು ಹಾಲಿನಲ್ಲಿ ಬೇಯಿಸಬೇಕು. ಬೇಯಿಸುವಾಗ ತಳ ಹಿಡಿಯದಂತೆ ಜಾಗ್ರತೆ ವಹಿಸಿ. ಕ್ಯಾರೆಟ್ ತುರಿ ಬೆಂದ ನಂತರ ಸಕ್ಕರೆ ಹಾಕಿ ಅದು ಕರಗುತ್ತಿದ್ದಂತೆಯೇ ಚೆನ್ನಾಗಿ ಹೊಂದಿಕೊಳ್ಳುವಂತೆ ನೋಡಿ. ಬಳಿಕ ತುಪ್ಪಸೇರಿಸಿ. ಬೇಕಿದ್ದಲ್ಲಿ ದ್ರಾಕ್ಷಿ ಗೋಡಂಬಿ ಸೇರಿಸಿಕೊಳ್ಳಬಹುದು.