ಬೇಕಾಗುವ ಸಾಮಾಗ್ರಿಗಳು:
ಚನ್ನಾ ದಾಲ್ - 2 ಕಪ್
ಬೆಲ್ಲ - 1 ಕಪ್
ತೆಂಗಿತುರಿ - ಮುಕ್ಕಾಲು ಕಪ್
ಏಲಕ್ಕಿ - 6
ಕೇಸರಿ - ಸ್ವಲ್ಪ
ಗೋಡಂಬಿ , ದ್ರಾಕ್ಷಿ, ಬಾದಾಮಿ
ಪಾಕ ವಿಧಾನ:
ಚನ್ನಾ ದಾಲನ್ನು ಕುಕ್ಕರಿನಲ್ಲಿ ಬೇಯಿಸಿ. ಇದಕ್ಕೆ ಬೆಲ್ಲ ಸೇರಿಸಿ ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಕಲಸುತ್ತಿರಿ. ಇದಕ್ಕೆ ತೆಂಗಿನತುರಿ ಸೇರಿಸಿ ನಂತರ ಐದು ನಿಮಿಷ ಸಣ್ಣ ಉರಿಯಲ್ಲಿಡಿ. ನಂತರ ಕೇಸರಿ, ಗೋಡಂಬಿ, ಬಾದಾಮಿ ಚೂರು ಮತ್ತು ದ್ರಾಕ್ಷಿಯನ್ನು ಸೇರಿಸಿ. ಕೊನೆಯಲ್ಲಿ ತುಪ್ಪ ಸೇರಿಸಿ.