ಬೇಕಾಗುವ ಸಾಮಾಗ್ರಿಗಳು:
ಕಡಲೇಹಿಟ್ಟು - 1 ಕಪ್
ರವಾ - 1 ಕಪ್
ತೆಂಗಿನ ತುರಿ - 1 ಕಪ್
ತುಪ್ಪ - 1 ಕಪ್
ಹಾಲು - 1 ಕಪ್
ಸಕ್ಕರೆ - 2 ಕಪ್
ಏಲಕ್ಕಿ ಪುಡಿ - ಅರ್ಧ ಚಮಚ
ಪಾಕ ವಿಧಾನ:
ಒಂದು ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಹಾಕಿ ಪಾಕ ಮಾಡಿಕೊಳ್ಳಿ.ಇದಕ್ಕೆ ತೆಂಗಿನತುರಿ, ಅರ್ಧ ಕಪ್ ತುಪ್ಪ, ಮತ್ತು ಏಲಕ್ಕಿಪುಡಿಯನ್ನು ಸೇರಿಸಿ.ಕಲಸುತ್ತಾ ಇರಿ.
ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ಕಡಲೇಹಿಟ್ಟು ಮತ್ತು ರವಾ ಬೆರೆಸಿ ಕಲಸುತ್ತಾ ಇರಿ. ಕೊನೆಯಲ್ಲಿ ಉಳಿದ ತುಪ್ಪವನ್ನು ಸೇರಿಸಿ ಗಟ್ಟಿಯಾಗುವವರೆಗೆ ಕಲಸಿ.ನಂತರ ಬೇಕಾದ ಆಕೃತಿಯಲ್ಲಿ ಕತ್ತರಿಸಿರಿ.