Select Your Language

Notifications

webdunia
webdunia
webdunia
webdunia

ಜು.20: ವೆಬ್ ವಿಹಾರ, ಅವಕಾಶ ಅಪಾರ ಪುಸ್ತಕ ಬಿಡುಗಡೆ

ಜು.20: ವೆಬ್ ವಿಹಾರ, ಅವಕಾಶ ಅಪಾರ ಪುಸ್ತಕ ಬಿಡುಗಡೆ
WD
ವಿಜ್ಞಾನ ಬರಹಗಾರ ಹಾಗೂ ವೃತ್ತಿಪರ ಸಾಫ್ಟ್‌ವೇರ್ ಇಂಜಿನಿಯರ್ ಟಿ.ಜಿ.ಶ್ರೀನಿಧಿ ಅವರ 'ವೆಬ್ ವಿಹಾರ' ಮತ್ತು 'ಅವಕಾಶ ಅಪಾರ' ಎಂಬ ಎರಜು ಕೃತಿಗಳು ಬೆಂಗಳೂರಿನಲ್ಲಿ ಜು.20ರಂದು ಬಿಡುಗಡೆಯಾಗಲಿವೆ.

ಭಾರತೀ ಪ್ರಕಾಶನ ಮೈಸೂರು - ಮಾಹಿತಿ ತಂತ್ರಜ್ಞಾನ ಪುಸ್ತಕಮಾಲೆ ಹೊರತಂದಿರುವ ಈ ಪುಸ್ತಕಗಳ ಬಿಡುಗಡೆ ಸಮಾರಂಭವು ಅಂದು ಸಂಜೆ 5 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಲಿದೆ.

ಅಂತರಜಾಲ ಲೋಕಕ್ಕೊಂದು ಬೆಳಕಿಂಡಿಯಂತಿರುವ 'ವೆಬ್ ವಿಹಾರ', ಅಂತರಜಾಲ ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಕೃತಿ. ಕಾರ್ಯಕ್ರಮದಲ್ಲಿ ವಿಜ್ಞಾನ-ಸಾಹಿತ್ಯ-ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನುಭವಿಗಳಾದ ನಾಗೇಶ ಹೆಗಡೆ, ಡಾ.ಯು.ಬಿ.ಪವನಜ, ಟಿ.ಆರ್.ಅನಂತರಾಮು ಹಾಗೂ ಕೊಳ್ಳೇಗಾಲ ಶರ್ಮಾ ಅವರು ಉಪಸ್ಥಿತರಿರುತ್ತಾರೆ.

Share this Story:

Follow Webdunia kannada