ಆಹಾ...ಚಾಕೊಲೇಟ್ ಪ್ರಿಯರಿಗೆ ಸಿಹಿ ಸುದ್ದಿ!
Publish Date: Fri, 17 Feb 2012 (11:58 IST)
Updated Date: Fri, 17 Feb 2012 (11:57 IST)
ಚಾಕೊಲೇಟ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ....? ಅದರಲ್ಲೂ, ಕ್ರೀಂ, ಮಿಲ್ಕ್, ಬಾದಾಮ್, ಕೊಬ್ಬರಿ ಹೀಗೆ ಹಲವು ರೀತಿಯಾ ವೈವಿಧ್ಯತೆಯನ್ನು ಚಾಕೊಲೇಟ್‍ನಲ್ಲಿ ನಾವು ಕಾಣುತ್ತೇವೆ. ಸಿಹಿ ಅಂದರೆ ಮಕ್ಕಳಿಗೆ ಪಂಚಪ್ರಾಣ ಅದರಲ್ಲೂ ಚಾಕೊಲೇಟ್ ಫ್ಲೇವರ್ ಇದ್ದರಂತು ಮಕ್ಕಳು ತುಂಬಾನೆ ಇಷ್ಟಪಟ್ಟು ತಿನ್ನುತ್ತಾರೆ. ಈಗ ಚಾಕೊಲೇಟ್‌ನಷ್ಟೆ ಸಿಹಿ ಸುದ್ದಿಯನ್ನು ಸಂಶೋಧಕರು ಚಾಕೊಲೇಟ್ ಪ್ರಿಯರಿಗೆ ನೀಡಿದ್ದಾರೆ...! ಚಾಕೊಲೇಟ್ ತಿನ್ನುವುದರಿಂದ ಹಲ್ಲು ಹಾಳಾಗುತ್ತದೆ, ಆರೋಗ್ಯಕ್ಕೆ ಹಾನಿಕರ ಎನ್ನುವ ಮಾತುಗಳೆಲ್ಲಾ ಸುಳ್ಳು ಎನ್ನುತ್ತಾರೆ ಸಂಶೋಧಕರು. ಅದರಲ್ಲಿಯೂ ಡಾರ್ಕ್ ಚಾಕೋಲೇಟ್ ಅಂತೂ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಚಾಕೊಲೇಟ್‌ನಲ್ಲಿ ಸಾಮಾನ್ಯವಾಗಿ ಕೊಕ್ಕೋ ಅಂಶವನ್ನು ಬಳಸುವುದರಿಂದ ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಿಲ್ಕ್ ಚಾಕೊಲೇಟ್‌ನಲ್ಲಿ ಫೋಸ್ಫೇಟ್ ಮತ್ತು ಇತರ ಖನಿಜಾಂಶಗಳು ಅಡಗಿದ್ದು ಇದು ಆರೋಗ್ಯ ದೃಷ್ಟಿಯಿಂದ ಅತ್ಯುತ್ತಮ ಎಂದು ನ್ಯೂಯಾರ್ಕ್ ಸಂಶೋಧಕರು ಅಭಪ್ರಾಯಪಟ್ಟಿದ್ದಾರೆ. ಅಲ್ಲದೆ ಚಾಕೊಲೇಟ್ ಸೇವನೆಯಿಂದ ಸುಸ್ತಾದ ಶರೀರ ಚುರುಕಾಗುವುದರ ಜೊತೆಗೆ ಮಾನಸಿಕ ಖಿನ್ನತೆಯನ್ನು ದೂರ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.ಚಹಾದಲ್ಲಿರುವುದಕ್ಕಿಂತ ನಾಲ್ಕು ಪಟ್ಟು ನಿರೋಧಕ ಶಕ್ತಿಯ ಓಕ್ಸಿಡೆಂಟ್‌ಗಳು ಚಾಕಲೇಟ್‌ನಲ್ಲಿದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನಲ್ಲದೆ ಕ್ಯಾನ್ಸರ್‌ನಂತಹ ರೋಗವನ್ನು ತಡೆಗಟ್ಟುವ ಶಕ್ತಿ ಇದರಿಂದ ದೊರೆಯುತ್ತದೆ ಎಂದು ಹಾಲೆಂಡ್‌ನ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ತಿಳಿಸಿದೆ.