Miscellaneous Health Article 0907 20 1090720072_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಸ್ಯಾ.. ಇದು ಹೃದಯದ ವಿಸ್ಯಾ...

ಹೃದಯ
WD
ಆಧುನಿಕ ಜೀವನ ಶೈಲಿಯಲ್ಲಿ ಹೆಚ್ಚಿನ ಜನರ ಜೀವನ ಒತ್ತಡಮಯ. ದೈನಂದಿನ ಜಂಜಾಟದಲ್ಲಿ ಮುಳುಗಿ ಹೋಗುವ ಹಲವರಿಗೆ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ನಾವು ಕೇಳುತ್ತಿರುವ ಅಳಲು. ಇಂತಹವರು ಅನೇಕ ರೋಗಗಳಿಂದ ಬಳಲುತ್ತಿರುವುದು ಸಹಜ ಎಂಬಂತಾಗಿದ್ದರೂ ಅದರಲ್ಲಿ ಬಹುತೇಕ ಮಂದಿಯು ಹೃದಯದ ಕಾಯಿಲೆಗೆ ತುತ್ತಾಗಿರುವುದನ್ನು ನಾವು ಕಾಣುತ್ತೇವೆ.

ಇಂದಿನ ಆಧುನಿಕತೆಯ ಭರಾಟೆಯಲ್ಲಿ ಜನರ ಜೀವನ ಕ್ರಮದಂತೆ ಆಹಾರ ಕ್ರಮವೂ ಬದಲಾಗುತ್ತ ಹೋಗುತ್ತದೆ. ತಾವು ಸೇವಿಸುತ್ತಿರುವ ಆಹಾರ ತಮ್ಮ ಹೊಟ್ಟೆ ತುಂಬಿದರೆ ಸಾಕು ಅಥವಾ ನಾಲಗೆಗೆ ರುಚಿಯೆನಿಸುವ ಯಾವುದೇ ವಸ್ತುಗಳನ್ನು ಸೇವಿಸುವುದು ಇಂದಿನ ಜನಾಂಗದ ಅಧುನಿಕ ಶೈಲಿ ಆಗಿಬಿಟ್ಟಿದೆ. ಸಾಂಪ್ರಾದಾಯಿಕ ಆಹಾರಗಳ ಸೇವನೆಯಿಂದ ಜಂಕ್‌ಫುಡ್‌ಗಳತ್ತ ಆಕರ್ಷಿತರಾಗಿರುವವರು ದುಡ್ಡುಕೊಟ್ಟು ಖಾಯಿಲೆ ಖರೀದಿಸುತ್ತಾರೆ.

ನಾವು ತಿನ್ನುವುದು ನಮ್ಮ ದೇಹಕ್ಕೆ ಯೋಗ್ಯವೋ ಎಂಬುದನ್ನು ಅರಿತು ಆಹಾರ ಸೇವಿಸುವವರು ನಮ್ಮಲ್ಲಿ ಅತೀವಿರಳ. ಹೀಗಾಗೇ ಬಹುತೇಕ ಮಂದಿಯು ಹಲವು ರೋಗಗಳಿಂದ ಬಳಲುತ್ತಿದ್ದು ಅಂತವುಗಳಲ್ಲಿ ಹೃದ್ರೋಗ ಸಹ ಒಂದಾಗಿದೆ. ಕ್ರಮೇಣವಿದು ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಆತಂಕದ ವಿಚಾರವಾಗಿದೆ. ಅಂದರೆ ಇಂದು ಹೃದಯ ಕಾಯಿಲೆಯು 30ರ ಹರೆಯದಲ್ಲೇ ಕಾಣಿಸಿಕೊಳ್ಳತೊಡಗಿದೆ ಎಂಬುದು ಆಘಾತಕಾರಿ ವಿಷಯ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ತಾವು ಆಧುನಿಕರೆಂಬ ಭ್ರಮೆಯಲ್ಲಿ ಫಾಸ್ಟ್ ಫುಡ್ ,ಜಂಕ್ ಫುಡ್ ಸೇವನೆ, ಇದರೊಂದಿಗೆ ಆರಾಮವಿಲ್ಲದ ಕೆಲಸ, ಒತ್ತಡದ ನಡುವೆ ಇಂದಿನ ಯುವಜನರು ಒದ್ದಾಡುತ್ತಿರುವಾಗ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿರುವುದು ಖೇದಕರ.

ಈ ರೋಗವನ್ನು ನಿಯಂತ್ರಿಸಬೇಕಾದರೆ ನಾವು ಸೇವಿಸುವ ಆಹಾರವನ್ನು ನಿಯಂತ್ರಣಕ್ಕೆ ತರಬೇಕಾಗುತ್ತದೆ. ಅಂದರೆ ಸಮತೂಕದ ಆಹಾರ ಸೇವನೆಯು ಅತೀ ಮುಖ್ಯ.ಅತಿಯಾದ ಆಹಾರ ಸೇವನೆಯು ಹಲವು ರೋಗಗಳಿಗೆ ರಹದಾರಿ ಅದರಂತೆಯೇ ನಾವು ಸೇವಿಸುವ ಆಹಾರಗಳು ಆರೋಗ್ಯಕರವಾಗಿ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದರೆ ಮಾತ್ರ ದೇಹದ ಪ್ರತಿಯೊಂದು ಅಂಗಗಳು ಆರೋಗ್ಯಕರವಾಗಿದ್ದು, ಸರಿಯಾಗಿ ಕೆಲಸ ಮಾಡುತ್ತವೆ.

ನಮ್ಮ ದೇಹದ ಪ್ರಧಾನ ಅಂಗವಾದ ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರವಾಗುವಂತೆ ಪ್ರವರ್ತಿಸುತ್ತಿದೆ. ಇದರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿರುವುದು ಅತೀ ಮುಖ್ಯ. ಆಹಾರ ಕ್ರಮದಲ್ಲಿ ಹೃದಯ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದು ಪ್ರಮುಖವಾಗಿದೆ. ಹೃದಯಾಘಾತ, ಹೃದಯಸ್ತಂಭನಗಳು ಇಲ್ಲವೇ ಇನ್ನಿತರ ಹೃದ್ರೋಗಗಳು ಕಾಣಿಸಿಕೊಂಡಾಗ ಮಾತ್ರ ನಾವು ಹೃದಯದ ಬಗ್ಗೆ ಎಚ್ಚೆತ್ತುಕೊಳ್ಳುವ ಬದಲಿಗೆ ಪ್ರತಿನಿತ್ಯವೂ ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸುವುದರಿಂದ ಹೃದ್ರೋಗವನ್ನು ತಡೆಯಬಹುದು, ಸಮತೂಕದ ಆಹಾರ ಸೇವನೆ ಇದಕ್ಕೆ ದಿವ್ಯೌಷಧಿಯಾಗಿದೆ.

ಆರೋಗ್ಯಯುತವಾದ ಹೃದಯಕ್ಕಾಗಿ ಕೆಲವು ಟಿಪ್ಸ್:
ಸಮತೂಕದ ಆಹಾರ ಸೇವನೆ
ನಿಯಮಿತ ವ್ಯಾಯಾಮ
ಶುದ್ಧವಾದ ವಾಯು ಸೇವನೆ
ಮಾದಕ ವಸ್ತುಗಳನ್ನು ಬಳಸದಿರುವುದು
ಚಿಂತೆ, ಆತಂಕಗಳಿಂದ ದೂರವಿರುವುದು

Share this Story:

Follow Webdunia kannada