Miscellaneous Health Article 0903 23 1090323089_1.htm

Select Your Language

Notifications

webdunia
webdunia
webdunia
webdunia

ನಿಮ್ಮ ನಿದ್ದೆಯ ಮೇಲೆ ನಿಯಂತ್ರಣವಿರಲಿ

ನಿದ್ದೆ
ನೀವು ಕಳೆದ ರಾತ್ರಿ ಸರಿಯಾಗಿ ನಿದ್ರಿಸಿಲ್ಲ ಎಂದಾದರೆ, ಅಥವಾ ಇಡೀ ದಿನ ನಿತ್ರಾಣಗೊಂಡಂತಾಗಿದ್ದೀರಿ ಎಂದಾದರೆ, ನೀವೂ ಸಹ ನಿದಿರಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ ಒಬ್ಬರು ಎಂದು ಅರ್ಥ. ಉದ್ವಿಗ್ನತೆ, ಆಸಿಡಿಟಿ ಹಾಗೂ ಇತರ ಹಲವಾರು ಲೈಫ್‌ಸ್ಟೈಲ್ ಕಾಯಿಲೆಗಳು ನಿಮ್ಮ ನಿದ್ದೆಗೆ ಹಾವಳಿ ಮಾಡುವ ಸಂಭವವೂ ಇದೆ. ಉತ್ತಮ ನಿದ್ರೆಯು ನಿಮ್ಮನ್ನು ದಿನ ಪೂರ್ತಿ, ಜಾಗೃತವಾಗಿ ಎಚ್ಚರದಿಂದ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸುವು ಉತ್ತಮ ಆರೋಗ್ಯಕ್ಕೆ ನಾಂದಿ ಎಂಬುದಾಗಿ ತಜ್ಞರು ಹೇಳುತ್ತಾರೆ.

"ನಿದ್ರೆಯು ನಮ್ಮ ಆರೋಗ್ಯ ಹಾಗೂ ಶ್ರೇಯಸ್ಸಿಗೆ ಅತಿಮುಖ್ಯವಾಗಿದೆ. ನಿದ್ರಾಹೀನತೆಯಿಂದ ಕಡಿಮೆಯಾಗುವ ನಿದ್ರಾ ಪ್ರಮಾಣಕ್ಕೆ ನಾವು ಕತ್ತರಿ ಹಾಕಬಾರದು. ನಿಮ್ಮನ್ನು ಅದು ನಿಯಂತ್ರಿಸುವ ಮುನ್ನ ನಿದ್ರೆಯ ಮೇಲೆ ನಿಯಂತ್ರಣ ಹೊಂದಿ ಎಂಬುದಾಗಿ ರಾಮನಾಥನ್ ಐಯ್ಯರ್ ಹೇಳುತ್ತಾರೆ. ಐಯ್ಯರ್ ಅವರು ನಿದ್ರಾ ಅಸ್ವಸ್ಥತೆ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.

ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾ ಕಾಯಿಲೆಯು ನಿದ್ರೆಗೆ ಜಾರುವ ಸಮಸ್ಯೆ, ನಿರ್ವಹಣೆ ಮತ್ತು ಅವಧಿ ಹಾಗೂ ನಿದ್ದೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಕಳಪೆ ಏಕಾಗ್ರತೆ, ಕಡಿಮೆ ಉತ್ಪಾದಕತೆ ಮತ್ತು ತಮ್ಮ ಕೆಲಸದಲ್ಲಿ ಕಳಪೆ ಗುಣಮಟ್ಟಕ್ಕೆ ಕಾರಣವಾಗುತ್ತಾರೆ.

ಇದಲ್ಲದೆ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಆಯಾಸ, ಬಳಲಿಕೆ, ಕಿರಿಕಿರಿಗೊಳಗಾಗುವಿಕೆ ಮತ್ತು ಮರೆಗುಳಿತನ ಕಾಣಿಸಿಕೊಳ್ಳಬಹುದಾಗಿದ್ದು, ಇದು ಸಂಬಂಧಗಳು ಹಳಸಲೂ ಕಾರಣವಾಗುವ ಸಂಭವವಿದೆ ಎಂಬ ಅಪಾಯದ ಗಂಟೆಯನ್ನೂ ಅಧ್ಯಯನ ಬಾರಿಸಿದೆ.

"ನಿದ್ರಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮತ್ತು ನಿದ್ರೆಯ ಸುರಕ್ಷತೆಗಾಗಿ ನಿದ್ರೆಯನ್ನು ಅತ್ಯಂತ ವಿಶ್ರಾಂತಿದಾಯಕವಾಗಿ ಮತ್ತು ಆನಂದದಾಯಕವಾಗಿಸುವುದು ಆರೋಗ್ಯಕರ ನಿದ್ರೆಯ ಅಭ್ಯಾಸಕ್ಕೆ ಸಹಾಯ ಮಾಡುತ್ತದೆ ಎಂಬುದಾಗಿ ಮುಂಬೈ ಮೂಲದ ಮನಶಾಸ್ತ್ರಜ್ಞ ಮನೋಜ್ ಭಟವಾಡೇಕರ್ ಹೇಳುತ್ತಾರೆ.

ನಿಯಮಿತ ನಿದ್ರಾ ಹವ್ಯಾಸ, ಅಥವಾ ಬೆಳಗ್ಗೆ ನಿಗದಿತ ವೇಳೆಗೆ ಹಾಸಿಗೆಯಿಂದ ಎದ್ದೇಳುವ ಹವ್ಯಾಸ, ಸಾಯಂಕಾಲಗಳಲ್ಲಿ ಅಥವಾ ದಿನದ ಇತರ ಅವಧಿಯಲ್ಲಿ ನಿದ್ರಿಸುವ ಹವ್ಯಾಸವನ್ನು ತೊರೆಯುವುದರಿಂದ, ವ್ಯಾಯಾಮವನ್ನು ಹೆಚ್ಚಿಸುವುದು, ಹಾಸಿಗೆಗೆ ಹೋಗುವ ಮುಂಚಿತವಾಗಿ ಕೆಫೆನ್ ಹಾಗೂ ಅಮಲು ಪದಾರ್ಥ ಸೇವಿಸುವುದನ್ನು ವರ್ಧಿಸುವ ಮೂಲಕ ಮತ್ತು ಹಗಲಿನಲ್ಲಿ ಸೂಕ್ತ ಅವಧಿಯ ಕೆಲಸ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡು ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದಾಗಿ ಅವರು ಹೇಳುತ್ತಾರೆ.

ಭಾರತೀಯ ನಿದ್ರಾಹೀನ ಸಂಘಟನೆ(ಐಎಸ್ಡಿಎ)ಯ ತಜ್ಞರು ಅಬ್ಬೊಟ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ಮಾರ್ಚ್ 3ರಿಂದ ಎಪ್ರಿಲ್ 7ರ ತನಕದ ಅವಧಿಯನ್ನು ನಿದ್ರಾ ಆರೋಗ್ಯದ ಜಾಗೃತಿ ಮಾಸ ಎಂದು ಘೋಷಿಸಿದೆ. ಐಎಸ್ಡಿಎಯ ಅಧ್ಯಕ್ಷರಾಗಿರುವ ಡಾ| ಜೆ.ಸಿ. ಸೂರಿ ಅವರು, ನಿದ್ರೆಯು ಮಾಸಿಕ ಹಾಗೂ ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅತಿಮುಖ್ಯ ಎಂದು ಹೇಳಿದ್ದಾರೆ.

ಸಮಸ್ಯೆಯ ಆರಂಭದಿಂಲೇ ಈ ಕುರಿತು ಕಾಳಜಿ ವಹಿಸಿ ಇದರಿಂದ ಮುಕ್ತ ಹೊಂದುವುದರಿಂದ ಗಂಭೀರ ಪರಿಣಾಮಗಳನ್ನು ತಪ್ಪಿಸಬಹುದು ಎಂದು ಐಯ್ಯರ್ ತಿಳಿಸಿದ್ದಾರೆ. ಹೈಪರ್‌ಟೆನ್ಶನ್, ಆರ್ತ್ರಿಟಿಸ್, ಡಯಾಬಿಟಿಸ್, ಆಸಿಡಿಟಿ ಹಾಗೂ ಹೃದ್ರೋಗದ ಔಷಧಿ ಸೇರಿದಂತೆ ಕೆಲವು ಔಷಧಿಗಳೂ ಸಹ ನಿದ್ರಾಹೀನತೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ವಾರದಲ್ಲಿ ಪ್ರತಿದಿನ ಆರು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ನಿದ್ರಿಸುವವರಲ್ಲಿ ಈ ಸಮಸ್ಯೆ ತಲೆದೋರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಹಾಗಾಗಿ ಸುಖನಿದ್ರೆಯನ್ನು ಬರಿಸಿಕೊಳ್ಳಿ, ಹಾಯಾದ ಆರೋಗ್ಯವಂತ ಜೀವನವನ್ನು ಹೊಂದುವಂತವರಾಗಿ.

ಗುಡ್‌ನೈಟ್!


Share this Story:

Follow Webdunia kannada