Miscellaneous Beauty Tips 0801 03 1080103034_1.htm

Select Your Language

Notifications

webdunia
webdunia
webdunia
webdunia

ಅಂದ ಹುಬ್ಬುಗಳ ಚಂದದ ಬಗ್ಗೆ....

ಅಂದ ಹುಬ್ಬುಗಳ ಚಂದದ ಬಗ್ಗೆ....
ರಶ್ಮಿ ಪೈ

ಮುಖದ ಸೌಂದರ್ಯ ವರ್ಧಿಸುವುದರಲ್ಲಿ ಹುಬ್ಬುಗಳ ಪಾತ್ರ ಇದ್ದೇ ಇದೆ. ಬಿಲ್ಲಿನಂತೆ ಬಾಗಿದ ಹುಬ್ಬುಗಳು ಬಾಣದಂತಹ ನೋಟಕ್ಕೆ ಸಹಾಯಕವಾಗುತ್ತವೆ. ಹುಬ್ಬುಗಳು ಕಣ್ಣಿನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೆತ್ತಿಯಿಂದ ಸುರಿಯುವ ಬೆವರಿನಿಂದಲೂ ಇನ್ನಿತರ ಪರಕೀಯ ವಸ್ತುಗಳಿಂದಲೂ ಕಣ್ಣನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಕಣ್ಣಿನ ಸೌಂದರ್ಯವನ್ನು ವರ್ಧಿಸಬೇಕಾದರೆ ಹುಬ್ಬುಗಳನ್ನು ಅಂದವಾಗಿರಿಸ ಬೇಕಾದುದು ಬಹು ಮುಖ್ಯ. ಕೆಲವರಿಗೆ ನೈಸರ್ಗಿಕವಾಗಿ ಹುಬ್ಬುಗಳು ಮುಖಕ್ಕೆ ಹೊಂದುವ ಆಕಾರದಲ್ಲಿದ್ದರೂ ಇನ್ನಿತರರಿಗೆ ಹುಬ್ಬನ್ನು ತಾವು ಇಚ್ಛಿಸುವ ಆಕಾರಕ್ಕೆ ಪರಿವರ್ತಿಸಲು ಇಂದು ಸಾಕಷ್ಟು ಮಾರ್ಗಗಳಿವೆ.

ನಿಮ್ಮ ಹುಬ್ಬುಗಳನ್ನು ಸುಂದರವಾಗಿರಿಸಲು ಕೆಲವು ಸಲಹೆಗಳು ಈ ಕೆಳಗಿನಂತಿವೆ.

1. ಹುಬ್ಬುಗಳಿಗೆ ಆಕಾರವನ್ನು ನೀಡಲು ತ್ರೆಡಿಂಗ್ ಮತ್ತು ಪ್ಲಕಿಂಗ್ ವಿಧಾನಗಳಿವೆ.ಪ್ಲಕಿಂಗ್ ಹೆಚ್ಚು ವೇದನಾ ಜನಕವಾಗಿದ್ದುದರಿಂದ ತ್ರೆಡಿಂಗ್ ಮಾಡುವುದು ಉತ್ತಮ.
2.ಹುಬ್ಬುಗಳಿಗೆ ತಮ್ಮ ಮುಖದ ಆಕಾರಕ್ಕನುಗುಣವಾದ ಆಕಾರವನ್ನು ನೀಡಿ.
3.ಹುಬ್ಬುಗಳನ್ನು ತ್ರೆಡಿಂಗ್ ಮಾಡುವಾಗ ಮೊದಲು ಸ್ರಾವರೋಧಕವನ್ನು ಹತ್ತಿಯಿಂದ ಹಚ್ಚಿದ ನಂತರ ಕಣ್ಣಿನ ರೆಪ್ಪೆಯ ಮೇಲ್ಭಾಗದಿಂದ ಮೊದಲು ತೆಗೆಯಬೇಕು.ಅನಂತರ ಬ್ರಷ್ ಬಳಸಿ ಒಪ್ಪವಾಗಿರಿಸಿದ ಮೇಲೆ ಚಿಕ್ಕ ಕತ್ತರಿ ಉಪಯೋಗಿಸಿ ಉದ್ದವಿರುವ ಕೂದಲುಗಳನ್ನು ಕತ್ತರಿಸಿ.
3.ಪ್ಲಕರ್ ಬಳಸಿ ಪ್ಲಕ್ ಮಾಡುತ್ತಿದ್ದರೆ ಹುಬ್ಬಿನ ಬುಡದಿಂದ ಕೂದಲು ಬೆಳೆಯುವ ದಿಶೆಗೆ ಕೀಳುವುದು ಒಳ್ಳೆಯದು. ಸ್ನಾನ ಮಾಡಿದ ನಂತರ ಪ್ಲಕ್ ಮಾಡುವುದರಿಂದ ಕೂದಲಿನ ರಂಧ್ರಗಳು ತೆರೆದಿರುತ್ತವೆ.ಆದುದರಿಂದ ಹೆಚ್ಚು ನೋವು ಸಂಭವಿಸುವುದಿಲ್ಲ.
4.ಹುಬ್ಬುಗಳು ಹೆಚ್ಚು ಒಪ್ಪವಾಗಿ ಕಾಣಲು ಹುಬ್ಬಿನ ಮೇಲೆ ವ್ಯಾಸಲೀನ್ ಸವರಿ,ಟೂತ್ ಬ್ರಶ್‌ನಿಂದ ಬಾಚಿ.
5.ಹುಬ್ಬುಗಳನ್ನು ಹೆಚ್ಚು ದಟ್ಟವಾಗಿರುವಂತೆ ಕಾಣಲು ಐ ಬ್ರೋ ಪೆನ್ಸಿಲ್ ಅಥವಾ ಕಾಡಿಗೆ ಬಳಸಬಹುದು.
6.ಹುಬ್ಬುಗಳಿಗೆ ನೈಸರ್ಗಿಕ ಅಂದ ಕೊಡಲು ಬ್ರೋ ಪೌಡರನ್ನು ಬ್ರೋ ಬ್ರಷ್‌ನಿಂದ ಮೆದುವಾಗಿ ಲೇಪಿಸಿದರೆ ಒಳ್ಳೆಯದು.
7.ಐ ಶೇಡೋಗಳು ಹುಬ್ಬುಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
8. ರಾತ್ರಿ ಸಮಯದಲ್ಲಿ ತ್ರೆಡಿಂಗ್ ಮಾಡುವುದರಿಂದ ಚರ್ಮವು ಬೇಗನೆ ನೋಯುವುದಿಲ್ಲ ಮತ್ತು ಇದು ಚರ್ಮವು ಕೆಂಪಾಗಿ ಕಾಣುವುದನ್ನು ತಪ್ಪಿಸುತ್ತದೆ.
9.ಹುಬ್ಬುಗಳಿಗೆ ಬಣ್ಣ ನೀಡುತ್ತಿದ್ದರೆ ಅವರವರ ಚರ್ಮದ ಬಣ್ಣವನ್ನು ಆರಿಸುವುದು ಸೂಕ್ತ.
10.ಹೇರ್ ಸ್ಪ್ರೇ ಬಳಸಿದನಂತರ ಬ್ರಷ್ ಉಪಯೋಗಿಸಿ ಬಾಚುವುದರಿಂದ ಹುಬ್ಬು ದಿನವಿಡೀ ಒಪ್ಪವಾಗಿರುತ್ತದೆ.
11.ಹುಬ್ಬುಗಳು ಹೆಚ್ಚು ದಪ್ಪವಾಗಿ ಕಾಣುತ್ತಿದ್ದರೆ ಫೇಸ್ ಪೌಡರನ್ನು ಅಲ್ಪ ಹಚ್ಚುವುದರಿಂದ ಹುಬ್ಬು ತೆಳ್ಳಗಾಗಿರುವಂತೆ ಕಾಣುವುದು.
12.ಹುಬ್ಬುಗಳು ದಟ್ಟವಾಗಿ ಬೆಳೆಯಲು ರಾತ್ರಿ ಮಲಗುವ ವೇಳೆ ಹುಬ್ಬುಗಳಿಗೆ ಕೊಬ್ಬರಿ ಎಣ್ಣೆ ಸವರಿ ಮಲಗಿರಿ.
13.ಹುಬ್ಬುಗಳು ದಟ್ಟವಾಗಿ ಮತ್ತು ಒಳ್ಳೆಯ ಆಕಾರವನ್ನು ಹೊಂದಲು ಎಳೆವೆಯಲ್ಲಿಯೇ ಹುಬ್ಬಿನ ಮೇಲೆ ಕಾಡಿಗೆ ಹಚ್ಚಿ ಅಂದವಾಗಿ ಆಕಾರ ನೀಡಿ.
14.ಮುಖಕ್ಕೆ ಯಾವುದೇ ಪ್ರಸಾದನ ಅಥವಾ ಲೇಪನ ಲೇಪಿಸುವಾಗ ಅದು ಹುಬ್ಬುಗಳಿಗೆ ತಾಗದಂತೆ ಎಚ್ಚರ ವಹಿಸಿ.
15.ಹುಬ್ಬುಗಳ ಅಂದವನ್ನು ಹೆಚ್ಚಿಸಲು ಬೆಳಗ್ಗೆ ಎದ್ದ ಕೂಡಲೇ ತೋರು ಬೆರಳಿನಿಂದ ನಯವಾಗಿ ಮಸಾಜ್ ಮಾಡಿ.

Share this Story:

Follow Webdunia kannada