Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ಮೊದಲೇ '5 ಈಡಿಯಟ್ಸ್' ಬ್ಯಾಂಕಾಂಗಿಗೆ ಲಗ್ಗೆ

5 ಈಡಿಯಟ್ಸ್
'5 ಈಡಿಯಟ್ಸ್ ಚಿತ್ರ' ಮುಗಿಯುವ ಮುನ್ನವೇ ಈ ಚಿತ್ರದ ಐದು ಜನ ಈಡಿಯಟ್‌ಗಳಿಗೆ ಅದೃಷ್ಟ ಖುಲಾಯಿಸಿದೆ. ಈ ಈಡಿಯಟ್‌ಗಳನ್ನು ಕನ್ನಡದ ಜನತೆ ನೋಡುವ ಮೊದಲೇ ಬ್ಯಾಂಕಾಕ್‌ಗೆ ಹಾರಿದ್ದಾರೆ.

ಭಯಪಡಬೇಕಿಲ್ಲ ಚಿತ್ರ ಮುಗಿಸದೆ ಏನೋ ಅಡ್ಡಾದಿಡ್ಡಿ ಕೆಲಸ ಮಾಡಿ ತಲೆಮರೆಸಿಕೊಂಡು ಬ್ಯಾಂಕಾಕ್‌ಗೆ ಓಡಿಹೋಗಿದ್ದಾರೆ ಎಂದುಕೊಳ್ಳಬೇಡಿ. ಇದೆಲ್ಲ ಚಿತ್ರರಂಗದ ಮಾತು. ನೂತನ ಚಿತ್ರ 'ಬ್ಯಾಂಕಾಕ್ ಬಾಯ್ಸ್' ಎಂಬ ಹೊಸ ಚಿತ್ರದ ಶೂಟಿಂಗಿಗೆ ಹೋಗಿದ್ದಾರೆ ಅಷ್ಟೆ.

ನಿರ್ದೇಶಕ ಆನಂದ್, ವಾಸು ಮತ್ತವರ ಗೆಳೆಯರು ಸೇರಿ 'ಫ್ರೆಂಡ್ಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಂತರ '5 ಈಡಿಯಟ್ಸ್' ಮಾಡಿದ್ದಾರೆ. ಅದು ಬಿಡುಗಡೆಯಾಗುವ ಮೊದಲೇ ಬ್ಯಾಂಕಾಕ್ ಬಾಯ್ಸ್ ಎಂಬ ಚಿತ್ರಕ್ಕೆ ಕೈಹಾಕಿದ್ದಾರೆ.

5 ಈಡಿಯಟ್ಸ್‌ನಲ್ಲಿ ನಟಿಸಿರುವ ನವೀನ್‌ಕೃಷ್ಣ, ವಾಸು, ಪೆಟ್ರೋಲ್ ಪ್ರಸನ್ನ, ಆನಂದ್ ಈ ಹೊಸ ಪ್ರಾಜೆಕ್ಟಿನಲ್ಲೂ ಇದ್ದಾರೆ. ಈಗ ಈ ತಂಡಕ್ಕೆ ಹೊಸ ಸೇರ್ಪಡೆ ಶರಣ್.

ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ಐವರು ನಾಯಕಿಯರ ಹುಡುಕಾಟ ನಡೆದಿದೆ. ಆನಂದ್ ಆಡಿಯೋ ಸಂಸ್ಥೆಯ ಮಾಲೀಕರು ನಿರ್ಮಾಣಕ್ಕೆ ಬರುವ ಸಾಧ್ಯತೆಗಳಿವೆ.

ಕನ್ನಡ ಚಿತ್ರರಂಗದ ಹಾಸ್ಯ ಪ್ರಧಾನ ಚಿತ್ರದ ಸಾಲಿಗೆ ಇದೂ ಸೇರಲಿದೆ ಎನ್ನುವ ಭರವಸೆ ರಿಮೇಕ್ ಖ್ಯಾತಿ ಶ್ರೀಧರ್ ಅವರದ್ದು. ಬಹುತೇಕ ಚಿತ್ರೀಕರಣ ಬ್ಯಾಂಕಾಕ್‌ನಲ್ಲೇ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada