ಸಾಕೋ ಸಾಕಾಯ್ತು ಈ ಸೆಕ್ಸೀ ಇಮೇಜ್ ಎಂದ ನಮಿತಾ!
ನಮಿತಾ ಮೈಮಾಟದ ದಯದಿಂದಲೋ ಏನೋ, ಗೊತ್ತಿಲ್ಲ. ಒಟ್ಟಾರೆ, ರವಿಚಂದ್ರನ್ ಅವರ ಹೂ ಚಿತ್ರ ಭರ್ಜರಿಯಾಗಿಯೇ ಓಡುತ್ತಿದೆ. ವಿತರಕರ ಕೈ ತುಂಬಿರುವುದರಿಂದ ಇದೀಗ ಇತರ ಕನ್ನಡ ಚಿತ್ರಗಳಿಗೂ ಬೇಡಿಕೆ ಕುದುರಿದೆ ಎನ್ನಲಾಗುತ್ತಿದೆ. ಆದರೆ ಈ ಸಂದರ್ಭ ಹೂ ಚಿತ್ರ ನೋಡಿದ ಮೇಲೆ ನಮಿತಾಗೆ ಜ್ಞಾನೋದಯವಾಗಿದೆಯಂತೆ. ಆದರೆ ಅವರ ಈ ಜ್ಞಾನೋದಯದಿಂದ ಖಂಡಿತವಾಗಿಯೂ ನಮಿತಾರ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ. ಯಾಕೆಂದರೆ, ನಮಿತಾಗೆ ಬಿಕಿನಿ ಧರಿಸಿ ಬೇಸತ್ತು ಹೋಗಿದೆಯಂತೆ. ಇನ್ನು ಮುಂದಾದರೂ ನನಗೆ ಸೆಕ್ಸೀ ಪಾತ್ರಗಳನ್ನು ನೀಡದೆ ಸ್ಕಿನ್ ಶೋನಿಂದ ನನ್ನನ್ನು ಮುಕ್ತಿಗೊಳಿಸಿ ಎಂದು ನಮಿತಾ ನಿರ್ಮಾಪಕರನ್ನು ಗೋಗರೆದಿದ್ದಾರೆ!
(20 ಫೋಟೋಗಳಿವೆ. ಮುಂದೆ ಕ್ಲಿಕ್ ಮಾಡಿ...)
ಅಂದ ಹಾಗೆ ನಮಿತಾ ಹೀಗೆ ಹೇಳುವುದು ಇದೇ ಮೊದಲಲ್ಲ. ಆದರೂ ನಮಿತಾ ಇದೀಗ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹೂ ಬಿಡುಗಡೆಯಾದ ನಂತರ ಇದೀಗ ಮತ್ತೊಮ್ಮೆ ಇದೇ ವಾಕ್ಯವನ್ನು ಪುನರುಚ್ಚರಿಸಿದ್ದಾರೆ.