Entertainment Bollywood Newsgossips 0708 31 1070831016_1.htm

Daily Horoscope

Select Your Language

Notifications

webdunia
webdunia
webdunia
webdunia

ಮುಖಗಳು ಕಾಣದ ಹೃತಿಕ್, ಐಶ್ವರ್ಯ ಪೋಸ್ಟರ್

ಐಶ್ವರ್ಯಳದ್ದು ಆಡಂಬರದಿಂದ
IFM
ಈ ವರ್ಷ ಚಿತ್ರಪ್ರೇಮಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಬಾಲಿವುಡ್ ಚಿತ್ರ ಜೋಧಾ ಅಕ್ಬರ್. ನಟ ಹೃತಿಕ್ ರೋಷನ್, ದಂತಕತೆ ಮೊಘಲ್ ಚಕ್ರವರ್ತಿ ಅಕ್ಬರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಭುವನ ಸುಂದರಿ ಖ್ಯಾತಿಯ ಐಶ್ವರ್ಯ ಬಚ್ಚನ್‌ಗೆ ರಜಪೂತ ರಾಣಿ ಜೋಧಾ ಪಾತ್ರ. ಇತಿಹಾಸದ ಪ್ರೇಮ ಕಥೆ ಚಿತ್ರದ ಕಥಾವಸ್ತು.

ಹೃತಿಕ್ ಯುವಕ ಅಕ್ಬರ್ ಪಾತ್ರದಲ್ಲಿ ನಟಿಸಿದ್ದು, ಇಡೀ ಚಿತ್ರದಲ್ಲಿ ಮೀಸೆಯಿರುವ, ಯೋಧನ ಉಡುಪಿನಲ್ಲಿ ಚಿತ್ರದುದ್ದಕ್ಕೂ ಮಿಂಚುತ್ತಾರೆ.
webdunia
IFM
ಐಶ್ವರ್ಯಳದ್ದು ಹರೆಯದ ರಜಪೂತ ರಾಜಕುಮಾರಿಯ ಪಾತ್ರ. ಕೆಂಪು ಸೀರೆಯಲ್ಲಿ ಆಡಂಬರದಿಂದ ಸಿಂಗರಿಸಿಕೊಂಡಿದ್ದಾಳೆ. ಮೈತುಂಬ ಚಿನ್ನದ ಒಡವೆಗಳು.

ಆದರೆ ಹೃತಿಕ್ ಮತ್ತು ಐಶ್ವರ್ಯ ಚಿತ್ರಗಳ ಪೋಸ್ಟರ್‌ಗಳಲ್ಲಿ ಅವರ ಮುಖಗಳ ಅರ್ಧ ಭಾಗ ಮಾತ್ರ ಕಾಣುವುದು ಚಿತ್ರಪ್ರೇಮಿಗಳ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ.

ಇದರ ನಿಗೂಢತೆ ಏನೆಂದು ಅವರಿಗೆ ಅರ್ಥವಾಗುತ್ತಿಲ್ಲ. ಜೋಧಾ ಅಕ್ಬರ್ ನಿರ್ದೇಶನ ಅಶುತೋಷ್ ಗೌರಿಕರ್ ಮತ್ತು ರೋನಿ ಸ್ಕ್ರಿವಾಲಾ ಮತ್ತು ಅಶುತೋಷ್ ಗೋವಾರಿಕರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada