Entertainment Bollywood Newsgossips 0708 22 1070822010_1.htm

Select Your Language

Notifications

webdunia
webdunia
webdunia
webdunia

ಭಾರತೀಯ ಸಂಸ್ಕೃತಿ ಪಸರಿಸಲು "ಮಿಸ್ ಬಾಲಿವುಡ್"

ಶಿಲ್ಪಾ ಶೆಟ್ಟಿ ಬ್ರಾಡ್‌ವೇ ಲಂಡನ್ ಬಾಲಿವುಡ್ ಭಾರತೀಯ ಸಂಸ್ಕೃತಿ
PTI
ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಖ್ಯಾತಿ ಗಳಿಸಿರುವ ಕರ್ನಾಟಕದ ತರಳೆ ಶಿಲ್ಪಾ ಶೆಟ್ಟಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡತೊಡಗಿದ್ದಾರೆ.

ಲಂಡನ್‌ನಲ್ಲಿ ತನ್ನ ಪರಿಮಳದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ, ಜರ್ಮನಿಯಲ್ಲಿ ತನ್ನ ಬ್ರಾಡ್‌ವೇ ಸಂಗೀತ-ನೃತ್ಯ ಪ್ರದರ್ಶನ "ಮಿಸ್ ಬಾಲಿವುಡ್"ನ ಪ್ರೀಮಿಯರ್ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ.

ನಟಿಯು ಈಗ "ಮಿಸ್ ಬಾಲಿವುಡ್"ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಇದು ಲಾಯ್ಡ್ ವೆಬರ್ ಅವರ ಬಾಂಬೇ ಡ್ರೀಮ್ಸ್ ಮಾದರಿಯಲ್ಲಿರುತ್ತದೆ.

ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ 60ನೇ ವರ್ಷಾಚರಣೆಯ ವರ್ಷದಲ್ಲಿ, ಶಿಲ್ಪಾ ಅವರ ಬ್ರಾಡ್‌ವೇ ಮ್ಯೂಸಿಕಲ್ ಪಾಶ್ಚಿಮಾತ್ಯರಿಗೆ ಭಾರತದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರಸ್ತುತಪಡಿಸಲಿದೆ ಎಂದು ಶಿಲ್ಪಾ ವಕ್ತಾರ ಡೇಲ್ ಭಾಗ್ವಗಾರ್ ತಿಳಿಸಿದ್ದಾರೆ.

ಕಳೆದೆರಡು ತಿಂಗಳಲ್ಲಿ ಶಿಲ್ಪಾ ಅವರು ಬಾಲಿವುಡ್ ಮತ್ತು ಭಾರತೀಯ ಸಂಸ್ಕೃತಿ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಬ್ರಾಡ್‌ವೇ ಸಂಗೀತ ಅಭಿಯಾನಕ್ಕೆ ಕೋರಿಯಾಗ್ರಾಫರ್ ಗಣೇಶ್ ಹೆಗಡೆ ನೃತ್ಯ ನಿರ್ದೇಶಿಸಿದ್ದಾರೆ. ಈ ತಂಡವು ಲಂಡನ್‌ನೆಲ್ಲೆಡೆ ಪ್ರವಾಸ ಮಾಡಲಿದೆ, ನಂತರ ಅಮೆರಿಕ ಹಾಗೂ ಆಸ್ಟ್ರೇಲಿಯಾಕ್ಕೂ ತೆರಳಿ ಅಲ್ಲಿ ಪ್ರದರ್ಶನ ನೀಡಲಿದೆ.

Share this Story:

Follow Webdunia kannada