Entertainment Bollywood Newsgossips 0708 20 1070820010_1.htm

Select Your Language

Notifications

webdunia
webdunia
webdunia
webdunia

ಬಚಕೇ ರಹನಾರೇ ಬಾಬಾ ತೆಲುಗಿಗೆ

ಬಚಕೇ
ಮುಂಬೈ , ಸೋಮವಾರ, 20 ಆಗಸ್ಟ್ 2007 (12:56 IST)
ದಕ್ಷಿಣ ಭಾರತದ ಚಿತ್ರಗಳನ್ನು ಬಾಲಿವುಡ್‌ಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ.ಆದರೆ ಬಾಲಿವುಡ್‌ನಿಂದ ಟಾಲಿವುಡ್ ಚಿತ್ರರಂಗಕ್ಕೆ ಡಬ್ ಮಾಡುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಹಾಗೂ ಚಿರಯವ್ವನೆ ರೇಖಾ ಅಭಿನಯದ 2005ರಲ್ಲಿ ತೆರೆಕಂಡ "ಬಚಕೇ ರಹೇನಾರೇ ಬಾಬಾ" ಬಾಲಿವುಡ್ ಚಿತ್ರ ತೆಲುಗಿಗೆ ಡಬ್ ಮಾಡಲಾಗುತ್ತಿದೆ.

ಚಿತ್ರಕ್ಕೆ ತೇಂಟಿಗಾಲು ಎಂದು ಹೆಸರಿಸಲಾಗಿದ್ದು, ಆಂಧ್ರದಾದ್ಯಂತ ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದೆ.

ಈ ಚಿತ್ರ ಬಿಡುಗಡೆಗಿಂತ ಮೊದಲು ಟಾಲಿವುಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

ಮಲ್ಲಿಕಾ ಶೆರಾವತ್ ಅವರ ಮಾದಕ ಸೌಂದರ್ಯ ಹಾಗೂ ನಟನೆಯಿಂದಾಗಿ ಚಿತ್ರ ಖಂಡಿತ ಲಾಭಗಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಚಿತ್ರ " ಬಚಕೇ ರೆಹನಾರೇ ಬಾಬಾ" ಚಿತ್ರವನ್ನು ಹಾಲಿವುಡ್ ಚಿತ್ರ "ಹರ್ಟ್ ಬ್ರೇಕರ್ಸ್ "ನಿಂದ ಡಬ್ ಮಾಡಲಾಗಿತ್ತು.

ಚಿರಂಜೀವಿ ಚಿತ್ರಗಳು ಮಾತ್ರ ಆಂಧ್ರಪ್ರದೇಶದಾದ್ಯಂತ ಭರ್ಜರಿ ಜಯಭೇರಿ ಬಾರಿಸುವ ಸಂದರ್ಭದಲ್ಲಿ ಮಲ್ಲಿಕಾಳ ಮಾದಕ ಸೌಂದರ್ಯ ಚಿರಂಜೀವಿ ಅಭಿಮಾನಿಗಳನ್ನು ಕಂಗಾಲಾಗಿಸಿದೆ.

Share this Story:

Follow Webdunia kannada