Entertainment Bollywood Interview 1005 12 1100512031_1.htm

Select Your Language

Notifications

webdunia
webdunia
webdunia
webdunia

ನಾನು ಸಲ್ಮಾನ್ ಒಂದಾಗಿದ್ದ ಆ ದಿನ!: ಇದು ಕತ್ರಿನಾ ಅಂತರಾಳ

ಸಲ್ಮಾನ್ ಖಾನ್
IFM
ಬಾಲಿವುಡ್ಡಿನ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಜೊತೆಗಿನ ಕತ್ರಿನಾ ಸರಸ ಇಂದು ನಿನ್ನೆಯದಲ್ಲ. ವರ್ಷಗಳೇ ಕಳೆದವು. ಆದರೆ ಕತ್ರಿನಾ ತನ್ನ ಹಾಗೂ ಸಲ್ಮಾನ್ ನಡುವಿನ ಸಂಬಂಧ ಕೇವಲ ಗೆಳೆತನ ಮಾತ್ರ ಎಂದಿದ್ದರು. ಜೊತೆಗೆ, ಸಲ್ಮಾನ್ ಜೊತೆಗೆನ ಮದುವೆ ವಿಚಾರ ಬಂದಾಗಲೂ, ತಾನೂಯಿತು ತನ್ನ ಕೆಲಸವಾಯಿತು ಅಂತ ಸುಮ್ಮನಿದ್ದಳು. ಆದರೆ ಇದೀಗ ಕೆಲ ದಿನಗಳ ಹಿಂದೆ ಕತ್ರಿನಾ ತನ್ನ ಹಾಗೂ ಸಲ್ಮಾನ್ ನಡುವಿನ ಖಾಸಗಿ ಕ್ಷಣಗಳನ್ನು ಬಿಚ್ಚಿಟ್ಟಿದ್ದಾಳೆ.

ಹೌದು. ಕತ್ರಿನಾ ಹಾಗೂ ಸಲ್ಮಾನ್ ಕೆಲ ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರು! ಹಾಗಂತ ಕತ್ರಿನಾ ಒಪ್ಪಿಕೊಂಡಿದ್ದಾರೆ. ನಾನು ಮುಂಬೈಗೆ ಬಂದ ಆರಂಭದ ದಿನಗಳಲ್ಲಿ ಸಲ್ಮಾನ್ ಖಾನ್ ನನಗೆ ಜೊತೆಯಾಗಿದ್ದ. ಆತ ಹಾಗೂ ನಾನು ಒಂದೇ ಮನೆಯಲ್ಲಿ ಕೆಲ ಕಾಲ ವಾಸವಾಗಿದ್ದೆವು. ಆತ ನನಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನೀಡಿದ ಸಹಾಯ ಅಷ್ಟಿಷ್ಟಲ್ಲ ಎಂದು ಕತ್ರಿನಾ ಸಲ್ಮಾನ್ ಬಗ್ಗೆ ಹೆಮ್ಮೆಯ ಮಾತಾಡಿದ್ದಾಳೆ.

ಹಾಗಾದರೆ ನಿಮ್ಮ ಗಾಢ್‌ಫಾದರ್ ಸಲ್ಮಾನ್ ಖಾನ್ ಅಲ್ವಾ ಎಂದರೆ ಕತ್ರಿನಾ ಪೂರ್ಣವಾಗಿ ಒಪ್ಪೋದಿಲ್ಲ. ನನಗೆ ಗಾಢ್‌ಫಾದರ್ ಕೇವಲ ಸಲ್ಮಾನ್ ಎಂದರೆ ತಪ್ಪಾಗುತ್ತೆ. ಸಲ್ಮಾನ್ ಥರಾನೇ ನನಗೆ ಚಿತ್ರರಂಗದಲ್ಲಿ ಸಾಧನೆ ಮಾಡಲು ನೆರವಾದುದು ಅಕ್ಷಯ್ ಕುಮಾರ್. ನಾನೇನೂ ಅಲ್ಲದ ಸಮಯದಲ್ಲಿ ನನ್ನೊಂದಿಗೆ ನಟಿಸಲು ಒಪ್ಪಿದ್ದು ಅಕ್ಷಯ್. ಅತ್ಯುತ್ತಮ ನಟನಾಗಿ ಚಿತ್ರರಂಗದಲ್ಲಿ ತನ್ನದೇ ಸ್ಥಾನ ಹೊಂದಿದ್ದ ಅಕ್ಷಯ್ ಅಂದು ನನ್ನೊಂದಿಗೆ ನಟಿಸಲು ಒಪ್ಪದಿದ್ದರೆ ನನಗಿಂಥಾ ಸ್ಥಾನ ದಕ್ಕುತ್ತಿರಲಿಲ್ಲ. ಖಂಡಿತಾ ಆತನ ಸಾಥ್ ಕೂಡಾ ನನಗೆ ಚಿತ್ರರಂಗದಲ್ಲಿ ಇಂಥ ಸಾಧನೆ ಮಾಡಲು ನೆರವಾಯಿತು ಎಂದು ಅಕ್ಷಯ್ ಕೂಡಾ ನನ್ನ ಗಾಢ್‌ಫಾದರ್ ಎನ್ನುತ್ತಾರೆ ಕತ್ರಿನಾ.

ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನನಗೇನೂ ಗೊತ್ತಿರಲಿಲ್ಲ. ಬಾಲಿವುಡ್ ಬಗ್ಗೆ ಅಂಥ ಜ್ಞಾನವೂ ಇರಲಿಲ್ಲ. ಅಂಥ ಸಂದರ್ಭದಲ್ಲಿ ನನಗೆ ನೆರವಾದವರು ಸಲ್ಮಾನ್. ಅಷ್ಟೇ ಅಲ್ಲ, ಒಂದು ಚಿತ್ರದಲ್ಲಿ ಅವಕಾಶ ಸಿಕ್ಕರೆ ಸಾಕು ಎಂಬ ಸ್ಥಿತಿ ಆಗ ನನ್ನದಾಗಿತ್ತು. ಆದರೆ ಸಲ್ಮಾನ್ ನನ್ನಲ್ಲಿ ಆತ್ಮವಿಶ್ವಾಸ ಬಿತ್ತಿದ. ನನಗೆ ನನ್ನ ಮೇಲೆ ಇಲ್ಲದ ಆತ್ಮಸ್ಥೈರ್ಯ ಆತನಿಗೆ ನನ್ನ ಮೇಲೆ ಇತ್ತು. ನಾನು ಗೆದ್ದೇ ಗೆಲ್ಲುತ್ತೇನೆಂಬ ಕಾನ್ಫಿಡೆನ್ಸ್ ಆತನಲ್ಲಿತ್ತು. ನಾನು ಈ ಮಟ್ಟದ ಕಾನ್ಫಿಡೆನ್ಸ್ ಗಳಿಸಲು ಆತನ ಪಾಲೂ ಇದೆ ಎನ್ನುತ್ತಾರೆ ಕತ್ರಿನಾ.
webdunia
IFM


ಮೊದಲ ಚಿತ್ರ ಬೂಮ್ ತೋಪೆದ್ದು ಹೋದರೂ, ಮೈನೇ ಪ್ಯಾರ್ ಕ್ಯೋಂ ಕಿಯಾ ಚಿತ್ರದಲ್ಲಿ ಸಲ್ಮಾನ್ ಜೊತೆ ನಟಿಸಿ ಹಿಟ್ ಆಯಿತು. ನಿಧಾನವಾಗಿ ಅವಕಾಶಗಳೂ ತೆರೆದವು. ನಮಸ್ತೇ ಲಂಡನ್, ಪಾರ್ಟರ್, ಸಿಂಗ್ ಈಸ್ ಕಿಂಗ್, ನ್ಯೂಯಾರ್ಕ್ ಹೀಗೆ ಸಾಲು ಸಾಲು ಹಿಟ್ ಚಿತ್ರಗಳು ಕತ್ರಿನಾ ಖದರನ್ನೇ ಬದಲಾಯಿಸಿದವು. ಮುದ್ದು ಮುಖ, ಗ್ಲ್ಯಾಮರ್ ಜೊತೆಗೆ ಹಿಂದಿ ಕಲಿಯ ತೊಡಗಿದ ಜಾಣೆ ಕತ್ರಿನಾ ಈಗ ಅಭಿನಯದಲ್ಲೂ ಸಾಕಷ್ಟು ಪಳಗಿದ್ದಾಳೆ. ಆದರೆ ಹಂತಹಂತದ ಯಶಸ್ಸು ದಾಖಲಿಸಿ ತಾನೀಗ ನಂ.1 ಸ್ಥಾನಕ್ಕೂ ಲಗ್ಗೆಯಿಟ್ಟಿರುವುದಕ್ಕೆ ತನಗೀ ರಂಗದಲ್ಲಿ ಆಪ್ತ ವಲಯ ನೀಡಿದ ಸಹಕಾರವನ್ನು ಕತ್ರಿನಾ ನೆನೆಸಿಕೊಂಡಿದ್ದು ಹೀಗೆ.

ಆದರೆ, ಅತ್ತ ಸಲ್ಮಾನ್ ಮದುವೆಯಾಗುವ ಕನಸು ಕಾಣುತ್ತಿದ್ದರೆ, ಕತ್ರಿನಾ ತನ್ನ ವೃತ್ತಿ ಬದುಕಿನ ಅತ್ಯುನ್ನತ ಶಿಖರ ತಲುಪಿದ್ದಾಳೆ. ವಯಸ್ಸೂ ಕೂಡಾ 25ಷ್ಟೇ. ಹಾಗಾಗಿ ಮದುವೆಯಾಗುವ ಮನಸ್ಸಂತೂ ಕತ್ರಿನಾಗಿದ್ದಂತಿಲ್ಲ.

ಈ ಬಗ್ಗೆ ಆಕೆಯಲ್ಲೇ ಕೇಳಿದರೆ, ಎಸ್. ನಾನು ಬೇಗ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ. ಇನ್ನೆರಡು ವರ್ಷದಲ್ಲಿ ಖಂಡಿತ ಮದುವೆಯಾಗುತ್ತೇನೆ ಎಂದಷ್ಟೇ ಹೇಳಿದ್ದಾಳೆ. ಆದರೆ ಯಾರು ಮದುವೆ ಗಂಡು ಎಂದರೆ ನೋ ಆನ್ಸರ್.

ಆದರೂ ಆಕೆಯ ಆಪ್ತ ವಲಯಗಳ ಪ್ರಕಾರ, ಸಲ್ಮಾನ್ ಖಾನ್‌ರನ್ನೇ ಕತ್ರಿನಾ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್ ಕೂಡಾ ಕಾಯುತ್ತಿರುವುದು ಆಕೆಗಾಗಿಯೇ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಸಲ್ಮಾನ್ ಹಾಗೂ ಕತ್ರಿನಾ ದಶಕದ ಜೋಡಿ ಎಂಬ ಬಿರುದನ್ನೂ ಪಡೆದಿದ್ದಾರೆ. ಇದು ಮುಂದುವರಿಯಲಿ ಎಂದೇ ಹಾರೈಸೋಣವೇ...

ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ಜೋಡಿಯ ತೆರೆಯ ಮೇಲಿನ ರೊಮ್ಯಾನ್ಸ್ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Share this Story:

Follow Webdunia kannada