Entertainment Bollywood Interview 0906 10 1090610084_1.htm

Select Your Language

Notifications

webdunia
webdunia
webdunia
webdunia

ನಾನು ಮಹಿಳಾ ದ್ವೇಷಿ ಅಲ್ಲ: ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್
IFM
ಆಕ್ಷನ್ ಹೀರೋ, ಬಾಲಿವುಡ್‌ನ ಸ್ಟಂಟ್ ಮ್ಯಾನ್ ಎಂದೆಲ್ಲ ಕರೆಸಿಕೊಂಡು ಈಗಲೂ ಬಹುಬೇಡಿಕೆಯ ಉತ್ತುಂಗದಲ್ಲಿರುವ ಅಕ್ಷಯ್ ಕುಮಾರ್‌ ನಿಜಜೀವನದಲ್ಲಿ ತಮ್ಮ ಚಿತ್ರದಲ್ಲಿದ್ದಂತೆ ಅಲ್ಲವೇ ಅಲ್ಲವಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅಕ್ಷಯ್ ಇದ್ದಕ್ಕಿದ್ದಂತೆ ಹೀಗೆ ಹೇಳಲು ಕಾರಣವೂ ಇದೆ. ಯಾಕೆಂದರೆ, ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಕರೀನಾ ಕಪೂರ್ ಜತೆಗಿನ ಕಂಭಕ್ತ್ ಇಶ್ಕ್ ಚಿತ್ರದಲ್ಲಿ ಅಕ್ಷಯ್‌ಗೆ ಸ್ತ್ರೀಸ್ವಾತಂತ್ರ್ಯಗಳಿಗೆ ಬೆಲೆಕೊಡದ ವ್ಯಕ್ತಿಯ ಪಾತ್ರವಂತೆ!

ಹೀಗಾಗಿ ಅಕ್ಷಯ್‌ಗೆ ಈಗ ಹೊಸ ಸಂಕಟ ಶುರುವಾಗಿದೆ. ಕಂಭಕ್ತ್ ಇಶ್ಕ್ ನೋಡಿ ತನ್ನ ಮಹಿಳಾ ಅಭಿಮಾನಿಗಳು ನನ್ನ ಮೇಲೆ ಕೋಪಿಸಿಕೊಂಡರೆ ಎಂಬ ಭಯವೋ ಗೊತ್ತಿಲ್ಲ. ಒಟ್ಟಾರೆ, ಕಂಭಕ್ತ್ ಇಶ್ಕ್ ಸಿನಿಮಾದಲ್ಲಿರುವಂತೆ ನಾನು ನಿಜಜೀವನದಲ್ಲಿ ಇಲ್ಲವೇ ಇಲ್ಲ. ಕೇವಲ ಅದು ಪಾತ್ರ ಮಾತ್ರ. ನೀವು ನಂಬಿದರೆ ನಂಬಿ, ನಾನು ನಿಜಜೀವನದಲ್ಲಿ ನಾನು ಮಹಿಳೆಯನ್ನು ಪಾದದಿಂದ ತಲೆಯವರೆಗೂ ಗೌರವಿಸುವ ವ್ಯಕ್ತಿ ಎಂದು ಅಕ್ಷಯ್ ಅಲವತ್ತುಕೊಂಡಿದ್ದಾರೆ.

ಹಾಗಾದರೆ ಅಕ್ಷಯ್ ಎಂಥಾ ಮನುಷ್ಯ..? (ಕುತೂಹಲ ಇದ್ದರೆ ಅವರ ಮಾತಲ್ಲೇ ಕೇಳಿ.)
ನಾನು ಮಹಿಳೆಯರನ್ನು ತುಂಬ ಗೌರವಿಸುತ್ತೇನೆ. ಅಸಾಮಾನ್ಯ ನಿಷ್ಟೆ ಹಾಗೂ ಜನ್ಮ ನೀಡುವ ಶಕ್ತಿ ಇವೆರಡು ಮಹಿಳೆಯಲ್ಲಿರುವ ಪ್ರಬಲ ಸಾಮರ್ಥ್ಯ. ಇವೇ ಕಾರಣಕ್ಕೆ ಮಹಿಳೆಯರನ್ನು ನಾನು ಅತೀವವಾಗಿ ಅಭಿಮಾನದಿಂದ, ಗೌರವದಿಂದ ನೋಡುವುದು. ನಮಗೆ ಜನ್ಮ ನೀಡಿ ಈ ಭೂಮಿಯ ಮೇಲೆ ತಂದ ಮಹಿಳೆಯ ವಾಕ್‌ ಸ್ವಾತಂತ್ರವನ್ನು ನಾವು ಪುರುಷರು ಹತ್ತಿಕ್ಕುತ್ತೇವೆ. ಅವರ ಬಗ್ಗೆ ಕೇವಲವಾಗಿ ಮಾತಾಡುತ್ತೇವೆ. ಯಾರಾದರೂ ಪುರುಷ ಮಹಿಳೆಯ ಜತೆ ಕೆಟ್ಟದಾಗಿ ವರ್ತಿಸಿದರೆ, ನನಗೆ ಎಷ್ಟು ಸಿಟ್ಟು ಬರುತ್ತದೆಂದರೆ, ಆ ಪುರುಷ ಖಂಡಿತಾ ಮಾರನೇ ದಿನ ಹಾಸಿಗೆಯಿಂದ ಏಳಲೇಬಾರದು ಎಂಬ ಶಾಪವನ್ನು ನಾನು ನೀಡುತ್ತೇನೆ.

webdunia
IFM
ಹಾಗಾದರೆ, ಟ್ವಿಂಕಲ್ ಜತೆಗೆ 9 ವರ್ಷಗಳ ದಾಂಪತ್ಯ ನಡೆಸಿದ ನಿಮಗೆ ಆಕೆ ಇಷ್ಟವಾಗಲು ಕಾರಣ?
ಟ್ವಿಂಕಲ್ ಖನ್ನಾ ಮೇಲೆ ನನಗೆ ಪ್ರೀತಿಯುಂಟಾಗಿದ್ದು ಆಕೆಯ ಸೌಂದರ್ಯದಿಂದ ಖಂಡಿತ ಅಲ್ಲ. ಬದಲಾಗಿ ಆಕೆಯ ಗುಣಗಳೇ ನನ್ನನ್ನು ಆಕೆಯೆಡೆಗೆ ಸೆಳೆಯಿತು. ಟ್ವಿಂಕಲ್ ಒಬ್ಬ ಅತ್ಯಂತ ವಂಡರ್‌ಫುಲ್ ಮಹಿಳೆ. ಜತೆಗೆ ಪ್ರತಿಭಾನ್ವಿತೆ ಕೂಡಾ. ಆಕೆ ತುಂಬಾ ಸ್ಟ್ರಾಂಗ್.

ಕಂಭಕ್ತ್ ಇಶ್ಕ್ ಚಿತ್ರದಲ್ಲಿ ನಿಮ್ಮ ಪಾತ್ರದ ಕುರಿತು?
ಕಂಭಕ್ತ್ ಇಶ್ಕ್ ರೊಮ್ಯಾಂಟಿಕ್ ಕಾಮಿಡಿ. ಅದರಲ್ಲಿ ನನ್ನದು ಸ್ಟಂಟ್ ಮ್ಯಾನ್ ಪಾತ್ರ. ಸಿಲ್ವೆಸ್ಟರ್ ಸ್ಟಾಲೋನ್ ಹಾಗೂ ಬ್ರ್ಯಾಂಡನ್ ರೂತ್‌ರಿಗಾಗಿ ನಾನು ಸ್ಟಂಟ್ ಮಾಡುವ ಸ್ಟಂಟ್ ಮ್ಯಾನ್ ಪಾತ್ರ ಇದರಲ್ಲಿ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ನಾನು ಕಟ್ಟಾ ಪುರುಷಾಭಿಮಾನಿ ಹಾಗೂ ಸ್ತ್ರೀಸ್ವಾತಂತ್ರ್ಯ ವಿರೋಧಿ. ಆದರೆ, ಆತ ನಂತರ ಸ್ತ್ರೀಯರನ್ನು ಗೌರವಿಸಲು ಕಲಿಯಲಾರಂಭಿಸುತ್ತಾನೆ. ಜತೆಗೆ, ಕೊನೆಗೆ ಆತ ಸ್ತ್ರೀಯರೇ ಪುರುಷರಿಗಿಂತ ಸ್ಟ್ರಾಂಗ್ ಎಂಬ ನಿರ್ಧಾರಕ್ಕೆ ಬರುವಂತಹ ಪಾತ್ರ.

ಹಾಗಾದರೆ ನೀವು ನಿಜ ಜೀವನದಲ್ಲೂ ಸ್ತ್ರೀಯರೇ ಪುರುಷರಿಗಿಂತ ಸ್ಟ್ರಾಂಗ್ ಎಂದು ನಂಬುತ್ತೀರಾ?
ಹೌದು. ಸ್ತ್ರೀಯರೇ ಪುರುಷರಿಗಿಂತ ಸ್ಟ್ರಾಂಗ್ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಖತ್‌ರೋಂ ಕಿ ಕಿಲಾಡಿಯ ಎರಡನೇ ಅವತರಣಿಕೆಯನ್ನು ಆರಂಭಿಸಿದ ಮೇಲಂತೂ ನನಗೆ ಇದು ಇನ್ನಷ್ಟು ಸತ್ಯವೆನಿಸಿದೆ.

ಅಕ್ಷಯ್ ನನ್ನ ಫೇವರಿಟ್ ಸಹನಟ ಎಂದು ಕರೀನಾ ಹೇಳಿದ್ದಾಳೆ? ಹಾಗಾದರೆ ನಿಮ್ಮ ಫೇವರಿಟ್ ಸಹನಟಿ?
ನಾನು ಎಲ್ಲರೊಂದಿಗೂ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲೂ, ಕತ್ರಿನಾ, ಕರೀನಾ, ಕರೀಷ್ಮಾ ಜತೆಗೆ ಅಭಿನಯಿಸುವುದು ಖುಷಿಕೊಟ್ಟಿದೆ. ಕಪೂರ್ ಸಹೋದರಿಯರ ಜತೆಗೆ ನಾನು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕರೀಷ್ಮಾ ಜತೆಗೆ 14 ಹಾಗೂ ಕರೀನಾ ಜತೆಗೆ ಏಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.

webdunia
IFM
ಹಾಗಾದರೆ ನಿಮ್ಮ ಹಾಗೂ ಸಿಲ್ವೆಸ್ಟರ್ ನಡುವಿನ ಸಂಬಂಧ ಹೇಗಿದೆ?
ನಾನು ಸಿಲ್ವೆಸ್ಟರ್ ತುಂಬ ಉತ್ತಮ ಸಂಬಂಧ ಹೊಂದಿದ್ದೇವೆ. ಅವರು ಕಳೆದ ವರ್ಷ ರ್ಯಾಂಬೋ‌ನಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ನಾವು ರ್ಯಾಂಬೋ ಬಗ್ಗೆ ಮಾತನಾಡುತ್ತೇವೆ. ಜತೆಗೆ ಸ್ಟಂಟ್ ಮ್ಯಾನ್‌ಗಳಿಗಿರುವ ಸಾಮಾನ್ಯ ಆರೋಗ್ಯ ತೊಂದರೆಗಳ ಬಗ್ಗೆ ಮಾತಾಡುತ್ತೇವೆ. ಸ್ಟಂಟ್ ಮ್ಯಾನ್‌ಗಳಿಗೆ ಯಾವಾಗಲೂ ಮೊಣಕಾಲಿನ ನೋವು, ಹಾಗೂ ಹಲವಾರು ಶಾರೀರಿಕ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅವರು ತಮ್ಮ ಕೆಲವು ಹೆಲ್ತ್ ಟಿಪ್ಸ್‌ಗಳನ್ನು ನನಗೆ ಹೇಳಿದರು. ತಾಂತ್ರಿಕವಾಗಿ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಅನುಭವವಿದೆ. ಅವರು ತಮ್ಮ ಆಹಾರ ಅಭ್ಯಾಸಗಳ ಬಗ್ಗೆಯೂ ನನಗೆ ತಿಳಿಸಿದರು.

ನೀವು ನಿಮ್ಮ ಬಗ್ಗೆ ತೆಗೆದುಕೊಳ್ಳುವ ಕಾಳಜಿಗಳು?
ನಾನು ಯಾವಾಗಲೂ ಸಮಯಕ್ಕೆ ಸರಿಯಾಗಿ ಮಲಗುತ್ತೇನೆ. ಪ್ರತಿ ದಿನವೂ ಒಂದು ಗಂಟೆ ಕಾಲ ಏನಾದರೂ ಕಠಿಣ ಶ್ರಮದ ಕೆಲಸ ಮಾಡುತ್ತೇನೆ. ಜತೆಗೆ ಭಾನುವಾರಗಳಂದು ರಜೆ ತೆಗೆದುಕೊಳ್ಳುತ್ತೇನೆ.

ಸ್ಟಂಟ್ ಕಷ್ಟವೋ, ಅಭಿನಯ ಕಷ್ಟವೋ?
ಸ್ಟಂಟ್ ತುಂಬಾ ಸುಲಭ. ಆದರೆ ಅಭಿನಯ ಕಷ್ಟ.

ಕಂಭಕ್ತ್ ಬಗ್ಗೆ ನಿರೀಕ್ಷೆ ಏನಿದೆ?
ನಾನು ಈವರೆಗೆ ಹಲವು ನಿರ್ದೇಶಕರ ಚೊಚ್ಚಲ ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವುಗಳು ಹಿಟ್ ಆಗಿವೆ. ಅಬ್ಬಾಸ್ ಮುಸ್ತಾನ್, ವಿಪುಲ್ ಶಾಹ್.. ಈಗ ಸಬೀರ್ ಖಾನ್ ಜತೆಗೆ. ಚಿತ್ರದ ಬಗ್ಗೆ ಇಂಥದ್ದೇ ಅನ್ನುವ ನಿರೀಕ್ಷೆ ಇಟ್ಟಿಲ್ಲವಾದರೂ, ಯಾವಾಗಲೂ ಪಾಸಿಟಿವ್‌ನ್ನು ಯೋಚಿಸುತ್ತೇನೆ.

Share this Story:

Follow Webdunia kannada