Publish Date: Wed, 20 May 2009 (22:26 IST)
Updated Date: Wed, 06 May 2009 (18:14 IST)
ಬಾಲಿವುಡ್ ನಟಿ ಕಂಗಾನಾ ರಾಣಾವತ್ ನಟನೆಯ ಮುಂದಿನ ಹಾಸ್ಯಪ್ರಧಾನ ಚಿತ್ರ 'ನೋ ಪ್ರಾಬ್ಲೆಮ್'. ಚಿತ್ರವನ್ನು ಬಾಲಿವುಡ್‌ನ ಜನಪ್ರಿಯ ನಟ ಅನಿಲ್ ಕಪೂರ್ ನಿರ್ಮಿಸಲಿದ್ದು, ಅನೀಸ್ ಬಜ್ಮಿ ನಿರ್ದೇಶನಗೈದಿದ್ದಾರೆ. ಬಾಲಿವುಡ್ ಸುಂದರಿ ಸುಶ್ಮಿತಾ ಸೇನ್ ಕಂಗಾನಾಳ ಸಹೋದರಿ ಪಾತ್ರದಲ್ಲಿದ್ದಾಳೆ.
ಚಿತ್ರದಲ್ಲಿನ ಪಾತ್ರದ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿದ ನಟಿ ಕಂಗಾನಾ ಚಿತ್ರದಲ್ಲಿ ಹಾಸ್ಯಪಾತ್ರ ನೀಡಿದುದಕ್ಕಾಗಿ ನಿರ್ಮಾಪಕ ಅನಿಲ್ ಕಪೂರ್‌ರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಗ್ಯಾಂಗ್‌ಸ್ಟಾರ್, ಫ್ಯಾಶನ್, ರಾಝ್ ಚಿತ್ರಗಳಲ್ಲಿ ನಟಿಸಿದ ಕಂಗಾನಾಳಿಗೆ ಇದುವರೆಗಿನ ಸಿನೆಮಾ ಜೀವನದಲ್ಲಿ ಹಾಸ್ಯ ಪಾತ್ರ ಸಿಕ್ಕಿರಲಿಲ್ಲ. ಕೇವಲ ಗಂಭೀರ ಪಾತ್ರಗಳನಷ್ಟೇ ಮಾಡುತ್ತಿದ್ದ ಕಂಗಾನಾಳಗೆ ಹಾಸ್ಯ ಪಾತ್ರದ ಮೂಲಕ ಉತ್ತಮ ಅವಕಾಶ ಒದಗಿ ಬಂದಿದೆ.
ರಾಣಾವತ್‌ಳ ಅತೀವ ಸಂತೋಷಕ್ಕೆ ಇನ್ನೊಂದು ಕಾರಣವೊಂದಿದೆ. ಅದೇನೆಂದರೆ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ನಟಿಸುವಾಸೆ ಈ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಸುಶ್ಮಿತಾ ಕಂಗಾನಾಳ ಸಹೋದರಿಯಾಗಿ ಅಭಿನಯಿಸುತ್ತಿದ್ದಾಳೆ. ಅನಿಲ್‌ರ ಬಹುನಿರೀಕ್ಷಿತ ಚಿತ್ರ 'ನೋ ಪ್ರಾಬ್ಲೆಮ್' ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದೆ.