Astrology Astro Articles 1008 13 1100813077_1.htm

Select Your Language

Notifications

webdunia
webdunia
webdunia
webdunia

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಶಂಖ
ND
ಆರ್. ಸೀತಾರಾಮಯ್ಯ

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ. ಪುರುಷರಿಗೆ ಬಲಹಸ್ತವನ್ನು, ಸ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖ, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು.

ಚಕ್ರದ ಆಕೃತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸವ್ಯ ಚಕ್ರ ಹಾಗೂ ಅಪ ಸವ್ಯ ಚಕ್ರ. ಸವ್ಯಚಕ್ರ ಅಂದರೆ ಪ್ರದಕ್ಷಿಣಾಕಾರವಾಗಿ ಸುತ್ತಿರುವ ಚಕ್ರ. ಈ ಸವ್ಯ ಚಕ್ರವು ವ್ಯಕ್ತಿಗೆ ಉತ್ತಮಯೋಗ, ಭಾಗ್ಯಗಳನ್ನು, ಉನ್ನತ ಸಾಧನೆಯನ್ನು ಸೂಚಿಸುತ್ತದೆ. ಅಪಸವ್ಯಚಕ್ರವಿದ್ದರೆ. ವ್ಯಕ್ತಿಯ ವಿವಾಹನಂತರ ತೊಂದರೆಗಳು ಉಂಟಾಗುತ್ತದೆ.

ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದೇ ಒಂದು ಚಕ್ರವಿದ್ದರೆ ಸುಖಜೀವನ ನಡೆಸುವವರಾಗುತ್ತಾರೆ. ಎರಡು ಚಕ್ರಗಳಿದ್ದರೆ, ಅಧಿಕಾರಯೋಗ, ಆಶ್ರಯದಾತರಾಗಿರುತ್ತಾರೆ. ಮೂರು ಚಕ್ರಗಳಿದ್ದರೆ ಶ್ರೀಮಂತಿಕೆಯ ಜೀವನ ನಡೆಸುವವರಾಗುತ್ತಾರೆ. ನಾಲ್ಕು ಚಕ್ರಗಳಿದ್ದರೆ ಧನ ಚಿಂತಕರಾಗುತ್ತಾರೆ, ಹಣ ಕಳೆದುಕೊಳ್ಳುತ್ತಾರೆ. ಐದು ಚಕ್ರಗಳಿದ್ದರೆ ವೈಭವದ ಜೀವನ ನಡೆಸುವವರಾಗುತ್ತಾರೆ. ಆರು ಚಕ್ರಗಳಿದ್ದರೆ ಭಾವೋದ್ರಿಕ್ತ ಸ್ವಭಾವದವರಾಗುತ್ತಾರೆ. ಏಳುಚಕ್ರಗಳಿದ್ದರೆ ಎಲ್ಲಾ ರೀತಿಯಿಂದಲೂ ಶುಭದಾಯಕದವರಾಗಿದ್ದು ಅಭಿವೃದ್ದಿ ಹೊಂದುತ್ತಾರೆ. ಎಂಟು ಚಕ್ರಗಳಿದ್ದರೆ ಅನಾರೋಗ್ಯದವರಾಗಿರುತ್ತಾರೆ. ಒಂಭತ್ತು ಚಕ್ರಗಳಿದ್ದರೆ ರಾಜಯೋಗಉಳ್ಳವರಾಗಿರುತ್ತಾರೆ. ಹತ್ತು ಚಕ್ರಗಳಿದ್ದರೆ ಯೋಗಿ ಪುರುಷ, ಚಕ್ರವರ್ತಿಯಾಗುತ್ತಾರೆ. ಅಶೋಕಚಕ್ರವರ್ತಿಗೆ ಹತ್ತು ಚಕ್ರಗಳಿದ್ದವು.

ಹೆಬ್ಬೆಟ್ಟಿನಲ್ಲಿ ಚಕ್ರವಿದ್ದರೆ ಪಿತ್ರಾರ್ಜಿತ ಆಸ್ತಿಪಡೆಯುತ್ತಾರೆ. ತೋರ್ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ. ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ. ಶುಭಕಾರ್ಯ, ದೇವತಾಕಾರ್ಯಗಳನ್ನು ಮಾಡುವುದರಿಂದ ಯಜ್ಞಯಾಗಾದಿ ಆಚರಣೆಯಿಂದ ಧಾರ್ಮಿಕವಾಗಿ ಹಣ ಸಂಪಾದನೆ ಮಾಡುತ್ತಾರೆ. ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಕಿರುಬೆರಳಿನಲ್ಲಿ ಚಕ್ರವಿದ್ದರೆ, ವ್ಯಾಪಾರ, ಉದ್ದಿಮೆಗಳಿಂದ ಹಣ ಸಂಪಾದನೆ ಮಾಡುತ್ತಾರೆ.

ಹೆಬ್ಬೆಟ್ಟಿನಲ್ಲಿ ಚಕ್ರವಿದ್ದರೆ, ವ್ಯಕ್ತಿಯ ಲಗ್ನವು ಜಲತತ್ವರಾಶಿಯಾಗಿರುತ್ತದೆ. ಅಂದರೆ, ಕಟಕ, ವೃಶ್ಚಿಕ ಅಥವಾ ಮೀನ ಲಗ್ನವಾಗಿರುತ್ತದೆ.

ಆರ್. ಸೀತಾರಾಮಯ್ಯ,
ಜೋತಿಷ್ಯರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೊಬೈಲ್: 94490 48340
ಸ್ಥಿರ ದೂರವಾಣಿ: 08182 227344

Share this Story:

Follow Webdunia kannada