Select Your Language

Notifications

webdunia
webdunia
webdunia
webdunia

ಯೋಗ ಮಾಡಿ: ನಿಮ್ಮ ದೇಹ ಮತ್ತು ಮನಸ್ಸನ್ನು ಕೂಲ್ ಆಗಿರಿಸಿ

ಯೋಗ ಮಾಡಿ: ನಿಮ್ಮ ದೇಹ ಮತ್ತು ಮನಸ್ಸನ್ನು ಕೂಲ್ ಆಗಿರಿಸಿ
, ಮಂಗಳವಾರ, 21 ಜೂನ್ 2016 (16:09 IST)
ಯೋಗ- ಪ್ರಾಚೀನ ಭಾರತಿಯ ಪದ್ಧತಿ. ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿರುವ ಯೋಗದಲ್ಲಿ ಚಿಕಿತ್ಸಕ ಅಂಶಗಳಿದ್ದು ನಿಧಾನವಾಗಿ ವಿಶ್ವದಾದ್ಯಂತ ಜೀವನಶೈಲಿಯಾಗಿ ಪರಿವರ್ತಿತವಾಗುತ್ತಿದೆ. 

ಔಷಧದಿಂದ ಸಾಧ್ಯವಿಲ್ಲದ್ದು ಯೋಗದಿಂದ ಹೇಗೆ ಸಾಧ್ಯ? ಇದು ರೋಗದಿಂದ ಮುಕ್ತಿ ಕೊಡುವುದಷ್ಟೇ ಅಲ್ಲ. ಮಾನಸಿಕ ಶಾಂತಿಯನ್ನು ಸಹ ನೀಡಬಲ್ಲದು.

ಇದು ಹಲವಾರು ಆಸನಗಳನ್ನು ಒಳಗೊಂಡಿರುವ ಆಧ್ಯಾತ್ಮಿಕ ಅಭ್ಯಾಸವಾಗಿದ್ದು ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಚೈತನ್ಯವನ್ನು ನೀಡುತ್ತದೆ.

ವೇದಕಾಲಕ್ಕೂ ಪೂರ್ವದಲ್ಲಿಯೇ ಯೋಗದ ಆಚರಣೆ ಇತ್ತು ಎಂದು ಋಗ್ವೇದದಲ್ಲಿ ಹೇಳಲಾಗಿದೆ. 
 
2015ರಲ್ಲಿ ವಿಶ್ವಸಂಸ್ಥೆ ಅಂತರಾಷ್ಟ್ರೀಯ ಯೋಗದಿನವನ್ನು ಆಚರಣೆಗೆ ತಂದಿತ್ತು. ಪ್ರತಿವರ್ಷ ಜೂನ್ 21 ರಂದು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 
 
ಯೋಗದಲ್ಲಿ ಅತ್ಯಂತ ಪ್ರಸಿದ್ಧವಾದ ಒಂದು ಆಸನವೆಂದರೆ ಸೂರ್ಯ ನಮಸ್ಕಾರ. ಇದು 12 ಆಸನಗಳನ್ನೊಳಗೊಂಡ ವೈಜ್ಞಾನಿಕ ತಂತ್ರವಾಗಿದೆ. ಇದು ಆರೋಗ್ಯಕ್ಕೆ ಅಸಂಖ್ಯಾತ ಅನುಕೂಲಗಳನ್ನುಂಟು ಮಾಡುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಲ್ಲಿ ನೀರೂರಿಸುವ ರುಚಿಯಾದ ಸ್ಟಫ್ಡ್ ಪನ್ನೀರ್ ಕ್ಯಾಪ್ಸಿಕಂ