Select Your Language

Notifications

webdunia
webdunia
webdunia
webdunia

ಬಾಯಲ್ಲಿ ನೀರೂರಿಸುವ ರುಚಿಯಾದ ಸ್ಟಫ್ಡ್ ಪನ್ನೀರ್ ಕ್ಯಾಪ್ಸಿಕಂ

Stuffed Paneer Capsicum recipe
ಬೆಂಗಳೂರು , ಮಂಗಳವಾರ, 21 ಜೂನ್ 2016 (14:20 IST)
ಕ್ಯಾಪ್ಸಿಕಂ ಪ್ರಿಯರಿಗಾಗಿ ಒಂದು ಹೊಸ ರೆಸಿಪಿ ಇಲ್ಲಿದೆ. ಮನೆಗಳಲ್ಲಿ ಸ್ಟಫ್ಡ್ ಕ್ಯಾಪ್ಸಿಕಮ್ ಕರಿ ಮಾಡುವುದು ಕಾಮನ್.. ಆದ್ರೆ ಇಲ್ಲಿ ತೋರಿಸುವ ರೆಸಿಪಿ ಸ್ವಲ್ಪ ಡಿಫರೆಂಟ್. ಸಮ್ಮರ್‌ ಸ್ಪೆಷಲ್‌ಗೆ ಮಾಡಬಹುದಾದಂತಹ ಪನ್ನೀರ್‌ನಿಂದ ಸ್ಟಫ್ಡ್ ಮಾಡಿರುವ ಕ್ಯಾಪ್ಸಿಕಮ್ ರೆಸಿಪಿ.. ನಾವು ನಿಮಗೆ ತೋರಿಸ್ತಿವಿ ನೋಡಿ

ಬೇಕಾಗುವ ಸಾಮಾಗ್ರಿಗಳು 
400 ಗ್ರಾಂ -ಕ್ಯಾಪ್ಸಿಕಮ್ 
250 ಗ್ರಾಂ ಪನ್ನೀರ್ 
2-3 ಸ್ಪೂನ್-ಎಣ್ಣೆ
ಹಸಿರು ಕೊತಂಬರಿ
1/2ಟೀ ಸ್ಪೂನ್ ಜೀರಿಗೆ 
1 ಟೀ ಸ್ಪೂನ್ ಕೊತಂಬರಿ ಪೌಡರ್ 
1/2 ಸ್ಪೂನ್ ಶುಂಠಿ ಪೇಸ್ಟ್
2 ಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್ 
1/4ಸ್ಪೂನ್ ಕೆಂಪು ಖಾರದ ಪುಡಿ
1/4 ಮಾವಿನಕಾಯಿ ಪೌಡರ್ 
1 ಟೀ ಸ್ಪೂನ್ ಉಪ್ಪು
webdunia
ಈಗ ಕ್ಯಾಪ್ಸಿಕಮ್‌ನ್ನು ತೆಗೆದುಕೊಂಡು ಮಧ್ಯದಿಂದ ಅರ್ಧ ಭಾಗ ಮಾಡಿ. ಅದನ್ನು ದುಂಡಾಗದಂತೆ ನೋಡಿಕೊಳ್ಳಿ.. ಈಗ ಕ್ಯಾಪ್ಸಿಕಮ್ ಒಳಗೆ ತಯಾರಿಸಿದ ಪೇಸ್ಟ್ ಹಾಗೂ ಪೊಡರ್‌ಗಳನ್ನು ಹಾಕಿ ತಯಾರಿಸುವ ಮಸಾಲವನ್ನು ತುಂಬಿ. ಆ ಮಸಾಲೆಯಲ್ಲಿ ಪನ್ನೀರ್ ಪೀಸ್‌ಗಳನ್ನು ಸೇರಿಸಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಕ್ಯಾಪ್ಸಿಕಮ್‌ನಲ್ಲಿ ತುಂಬಿಸಿರುವ ಪನ್ನೀರ್ ಮಸಾಲೆಯನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. 
webdunia
ಉಳಿದ ಮಸಾಲೆಯನ್ನು ಸಹ ಅದರ ಮೇಲೆ ಹಾಕಿ.. ನೀರು ಹಾಕಬೇಡಿ. ಅದು ಪೂರ್ತಿಯಾಗಿ ಫ್ರೈ ಆದ್ಮೇಲೆ ಕೆಳಗೆ ಇಳಿಸಿ. ಇದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸವಿಯಲು ನೀಡಬಹುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಟ ಪನ್ನೀರ್ ಬುರ್ಜಿ ರೆಸಿಪಿ ನಿಮ್ಮ ಮುಂದೆ