ಎಗ್ ಬುರ್ಜಿ ಮಾಡುವುದು ಎಲ್ಲರಿಗೂ ಗೊತ್ತಿದೆ. ಆದ್ರೆ ಪನ್ನೀರ್‌ನಿಂದ ಬುರ್ಜಿ ಮಾಡಬಹುದು. ಅರೇ.. ಇದೇನಿದು ಅಂತಿರಾ? ಯೆಸ್, ಕೆಲವರಿಗೆ ಎಗ್ ಬುರ್ಜಿ ತಿಂದು ಬೇಜಾರ ಆಗಿದ್ರೆ, ನೀವೂ ಒಮ್ಮೆ ನಾವು ತೋರಿಸೋ ಪಂಜಾಬಿ ಪನ್ನೀರ್ ಬುರ್ಜಿಯನ್ನು ಟ್ರೈ ಮಾಡಬಹುದು.. ರೆಸ್ಟೋರೆಂಟ್‌ಗಳಲ್ಲಿ ಮಾಡಿದ ಬುರ್ಜಿಗಿಂತಲೂ ಇದನ್ನು ಮನೆಯಲ್ಲಿ ಮಾಡಿ ತಿಂದ್ರೆ ರುಚಿಕರವಾಗಿರಬಲ್ಲದು. ಅಂದಹಾಗೆ ಪನ್ನೀರ್ ಬುರ್ಜಿ 5 ನಿಮಿಷದಲ್ಲೇ ಮಾಡಬಹುದಾದ ರೆಸಿಪಿ. ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ
..
ಪನ್ನೀರ್ ಬುರ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು
200 ಗ್ರಾಂ ಪನ್ನಿರ್
1 ಚಮಚಾ ಎಣ್ಣೆ
1/4 ಚಮಚಾ ಜೀರಿಗೆ
ಖಾರಕ್ಕೆ ತಕ್ಕ ಹಸಿಮೆಣಸಿನಕಾಯಿ,
1 ಈರುಳ್ಳಿ
1/4 ಚಮಚಾ ಅರಿಶಿಣ
1/2 ಚಮಚಾ ಗರಂ ಮಸಾಲಾ
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ 1 ಚಮಚಾ
ಟಮೊಟೊ 1
ರುಚಿಗೆ ತಕ್ಕ ಉಪ್ಪು
*ಕಾದ ಬಾಣಲೆಯಲ್ಲಿ ಎಣ್ಣೆ ಬೀಸಿ ಮಾಡಿದ ಬಳಿಕ ಕತ್ತರಿಸಿದ ಈರುಳ್ಳಿ,ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣ ಬರುವರೆಗೆ ಹುರಿಯಬೇಕು. *ಈಗ ಟಮೊಟೊ ಮತ್ತು ಹಸಿಮೆಣಸಿನಕಾಯಿ ಹಾಕಿ. ಟೊಮೊಟೊ ಮೆತ್ತಗಾಗಿದ ಮೇಲೆ ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಸೌಟ್‌ನಿಂದ ಚೆನ್ನಾಗಿ ಆಡಿಸಬೇಕು.
*ಬಳಿಕ ಕತ್ತರಿಸಿದ ಪನ್ನೀರ್ ಹಾಕಿ ಐದು ನಿಮಿಷ ಹುರಿದರೆ ಪನ್ನೀರ್ ಮಸಾಲೆ ಜತೆ ಚೆನ್ನಾಗಿ ಮಿಷ್ರವಾಗುತ್ತದೆ. ಈಗ ತಯಾರಾದ ಪನ್ನೀರ್ ಬುರ್ಜಿಯನ್ನು ಕತ್ತರಿಸಿದ ಕೊತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಬುರ್ಜಿ ಸವಿಯಲು ರೆಡಿ. ಇದನ್ನು ರೊಟ್ಟಿ ಹಾಗೂ ಜಪಾತಿ ಜತೆಗೆ ತಿಂದ್ರೆ ರುಚಿಕರವಾಗಿರುತ್ತದೆ.
ಪನ್ನೀರ್ ಎಲ್ಲರಿಗೂ ಇಷ್ಟವಾಗುವ ರೆಸಿಪಿ.. ಸೋ. ಪನ್ನೀರ್ ಪ್ರೇಮಿಗಳಿಗೆ ಸ್ಪೆಷಲ್ ಔತಣ ನಿಮ್ಮ ಮುಂದೆ ಇಟ್ಟಿದ್ದೇವೆ. ಮೇಕ್ ಈಸಿ ಟೂ ಮೇಕ್ ಯಮಿ.. ಪನ್ನೀರ್ ಬುರ್ಜಿಯ ರುಚಿ ರುಚಿಕರ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ