Select Your Language

Notifications

webdunia
webdunia
webdunia
webdunia

ಹೆಣ್ಣಾಗಿ ಹುಟ್ಟಿರೋದಕ್ಕೆ ಹೆಮ್ಮೆ ಪಡಬೇಕು

ಹೆಣ್ಣಾಗಿ ಹುಟ್ಟಿರೋದಕ್ಕೆ ಹೆಮ್ಮೆ ಪಡಬೇಕು
ಬೆಂಗಳೂರು , ಗುರುವಾರ, 5 ಮಾರ್ಚ್ 2020 (15:50 IST)
ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?



ಹದಿನೆಂಟನೇ ಶತಮಾನದಲ್ಲಿ ಸಂಚಿಯ ಹೊನ್ನಮ್ಮ ಬರೆದ ಸಾಲುಗಳು  ಇಂದಿಗೂ, ಎಂದಿಗೂ ಪ್ರಸ್ತುತವೇ..
ಹೆಣ್ಣು ಮೃದು, ಮಧುರವಾಗಿರಬೇಕು ಎನ್ನುವ ಕಾಲ ಇದಲ್ಲ. ಅವಳಿಂದು ಸುಕೋಮಲೆ, ಶ್ಯಾಮಲೆಯಾಗಿ ಮುದುರಿಕೊಂಡು ಮನೆಯೊಳಗೆ ಕೂತಿಲ್ಲ.. ಪುರುಷರಿಗೆ ಸಮಾನವಾಗಿ ತಾನೂ ನಿಲ್ಲಬಲ್ಲೆ.. ಎಂತಹ ಸ್ಥಿತಿಯಲ್ಲೂ ಧೈರ್ಯವಾಗಿ, ಜವಾಬ್ದಾರಿಯುತವಾಗಿ ಮುನ್ನಗ್ಗಬಲ್ಲೆ ಎಂದು ಪ್ರಪಂಚಕ್ಕೆ ಮುಖ ಕೊಟ್ಟು ನಿಂತಿದ್ದಾಳೆ. ಭೂಮಿ,  ನೀರು, ಆಕಾಶ - ಹೆಣ್ಣು ಮಗಳು ಕಾಲಿಡದ ಜಾಗವೇ ಇಲ್ಲ. ಇಂಥ ಕಾಲದಲ್ಲಿ ಹೆಣ್ಣಾಗಿ ಹುಟ್ಟಿರೋದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು.

ನಾನೂ  ಸಹ ಗಂಡು ಮಕ್ಕಳ ನಡುವೆ ಬೆಳೆದವಳು. ಆದ್ರೆ ನಮ್ಮ ಅಪ್ಪ ಅಮ್ಮ ಯಾವತ್ತೂ ಹೆಣ್ಣು ಗಂಡು ಅಂತ ಭೇಧ ಭಾವ ಮಾಡೇ ಇಲ್ಲ. ಹುಡುಗರಿಗಿಂತ ಹುಡುಗೀರು ಯಾವುದರಲ್ಲೂ ಕಮ್ಮಿ ಇರಬಾರದು ಅಂತಿದ್ರು.


ಹೇಗೆ ಮಾತಿಗೆ ಸಿಕ್ಕಾಗ ಹಿರಿಯರೊಬ್ರು ಹೇಳ್ತಾ ಇದ್ರು ಗಂಡು ಮಕ್ಕಳು ತಮ್ಮ  ಜೀವನದಲ್ಲಿ ಮಾಡೋಕೆ ಆಗಿದಿರೋ ಒಂದು ಕೆಲಸ ಅಂದ್ರೆ ಅದು ಗರ್ಭ ಧರಿಸಿ, ಹೆರೋದು.. ಅಂತ. ಹೀಗಿರುವಾಗ ಹೆಣ್ಣುಮಕ್ಕಳಾಗಿ ಪುರುಷರು ಮಾಡೋ ಎಲ್ಲಾ ತರಹದ ಕೆಲಸಗಳ ಜೊತೆಗೆ ಮಗು ಹೆರೋದು, ಅದರ ಆರೈಕೆ ಮಾಡೋದು, ಮನೆ ಜವಾಬ್ದಾರಿ ಹೀಗೆ ಪ್ರತಿಯೊಂದನ್ನೂ ಮಾಡೋ ನಾವು ನಮ್ಮ ಬೆನ್ನು ತಟ್ಟಿಕೊಳ್ಳೋದ್ರಲ್ಲಿ ಏನು ತಪ್ಪು.


ಸಮಾಜ ನಮಗೆ ಸ್ವಾತಂತ್ರ್ಯ ಕೊಡುತ್ತೆ, ಅಂದುಕೊಂಡದ್ದನ್ನ ಸಾಧಿಸೋಕೆ ಪ್ರೋತ್ಸಾಹ ಕೊಡುತ್ತದೆ. ಹೀಗಿರುವಾಗ ಸಮಾನತೆಗಾಗಿ ಕಿತ್ತಾಡೋ ಬದಲು ದಾರಿ ಮಾಡಿಕೊಂಡು ಮುನ್ನುಗ್ಗೋದು ಒಳಿತಲ್ಲವೇ..ಆದರೆ ಒಂದಂತೂ ನೆನಪರಲಿ ಸಮಾಜ ಹೆಣ್ಣುಮಕ್ಕಳಿಗೆ  ಕೊಡೋ ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ.
                                                                                                                                                                                                                                                                                    -ಅಕ್ಷತಾ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣೆಂದು ಜರಿಯದಿರಿ!