ಮೂಲಂಗಿ ಪಲಾವ್ ಆರೋಗ್ಯಕ್ಕೆ ಪೂರಕ

Webdunia
ಮಂಗಳವಾರ, 9 ಜೂನ್ 2020 (19:04 IST)
ಪಲಾವ್ ಅಡುಗೆ ಪ್ರಿಯರ ನೆಚ್ಚಿನ ಬಗೆಯಲ್ಲೊಂದು. ಆರೋಗ್ಯಕ್ಕೆ ಪೂರಕವಾಗಿರುವ ಮೂಲಂಗಿ ಪಲಾವ್ ಬಿಡುವಿನ ವೇಳೆ ಮಾಡಿ ನೋಡಿ.

ಏನೇನ್ ಬೇಕು?
ಕೆಂಪು ಮೂಲಂಗಿ ಕಾಲು ಕಿಲೋ
ಬಾಸುಮತಿ ಅಕ್ಕಿ ಕಾಲು ಕಿಲೋ
ತುಪ್ಪ ಅರ್ಧ ಬಟ್ಟಲು
ಮೊಸರು ಕಾಲು ಬಟ್ಟಲು
ಹಸಿಮೆನಸಿನಕಾಯಿ 4
ಗರಂ ಮಸಾಲೆ ಪುಡಿ 1 ಚಮಚ
ಲವಂಗ 4
ಅರಿಶಿನ 2 ಚಿಟಿಕೆ
ಉಪ್ಪು
ಈರುಳ್ಳಿ 2

ಮಾಡೋದು ಹೇಗೆ?:
ಅಕ್ಕಿ ತೊಳೆದು 20 ನಿಮಿಷ ಜರಡಿಗೆ ಬಸಿಹಾಕಿ ಬಾಣಲೆಗೆ ತುಪ್ಪ ಹಾಕಿ ಅಕ್ಕಿ ಹುರಿಯಿರಿ. ಹೆಚ್ಚಿದ ಈರುಳ್ಳಿ, ಹಸಿಮೆನಸಿನಕಾಯಿ, ಅರಿಶಿನ, ಗರಂ ಮಸಾಲೆ ಪುಡಿ, ಲವಂಗ ಹಾಕಿ ಹುರಿಯಿರಿ. ಮೊಸರು, ಕೆಂಪು ಮೂಲಂಗಿ ಹೋಳು ಹಾಕಿ ಅಕ್ಕಿಯ ಎರಡರಷ್ಟು ನೀರು ಹಾಕಿ ಕುದಿಸಿ. ಬೆಂದ ನಂತರ ಉಪ್ಪು ಹಾಕಿ ಕೆದಕಿ ಮುಚ್ಚಿಡಿ. 5 ನಿಮಿಷ ಸಣ್ಣ ಉರಿಯಲ್ಲಿ ಬೆಂದ ನಂತರ ಕೆಳಗಿಳಿಸಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments