Webdunia - Bharat's app for daily news and videos

Install App

ಈ ಚಟ್ನಿ ಮಾಡಿ ನೋಡಿ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ

Webdunia
ಸೋಮವಾರ, 11 ಡಿಸೆಂಬರ್ 2017 (11:40 IST)
ಬೆಂಗಳೂರು: ಹೆಚ್ಚಾಗಿ ಮಕ್ಕಳು ಬೆಳಿಗ್ಗಿನ ತಿಂಡಿಗಳಾದ ದೋಸೆ, ಇಡ್ಲಿಗಳನ್ನು ತಿನ್ನುವಾಗ ಜೊತೆಗೆ ಚಟ್ನಿ ಹಾಕಿದರೆ ಅದನ್ನು ತಿನ್ನುವುದೆ ಇಲ್ಲ. ಬದಲಾಗಿ ಸಾಂಬಾರು ಮಾಡಿಕೊಡುವಂತೆ ಗಲಾಟೆ ಮಾಡುತ್ತಾರೆ. ಬಿಡುವೆ ಇಲ್ಲದ ಮನೆ ಕೆಲಸದ ನಡುವೆ ಚಟ್ನಿ, ಸಾಂಬಾರು ಅಂತ ಎರಡೆರಡು ಬಗೆ ಮಾಡುತ್ತಾ ಕುಳಿತ್ತರೆ ಬೇರೆ ಕೆಲಸಗಳು ಮುಗಿಯುವುದೆ ಇಲ್ಲ. ಅದಕ್ಕಾಗಿ ಮಕ್ಕಳಿಗೆ ದೋಸೆ, ಇಡ್ಲಿಗಳನ್ನು ತಿನ್ನಲು ಜೊತೆಗೆ ಟೊಮೆಟೊ ಚಟ್ನಿ ಮಾಡಿಕೊಡಿ. ಆವಾಗ ನೋಡಿ ನೀವು ಬೇಡ ಎಂದರು ಬಿಡದೆ ಟೊಮೊಟೊ ಚಟ್ನಿ ತಿಂದು ಮುಗಿಸುತ್ತಾರೆ.


ಬೇಕಾಗಿರುವ ಸಾಮಗ್ರಿ:
ಟೊಮೊಟೊ- 1 ಅಥವಾ 2, ದನಿಯಾ-1/4 ಚಮಚ, ಬ್ಯಾಡಗಿ ಮೆಣಸು- 2, ಬೆಳ್ಳುಳ್ಳಿ-1ಎಸಳು, ತೆಂಗಿನತುರಿ-1/2 ಕಪ್, ಉಪ್ಪು.


ಮಾಡುವ ವಿಧಾನ:
ದನಿಯಾ ಹಾಗು ಬ್ಯಾಡಗಿ ಮೆಣಸನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ, ಟೊಮೊಟೊವನ್ನು ಗ್ಯಾಸ್ ನಲ್ಲಿ ಅದರ ಸಿಪ್ಪೆ ಸ್ವಲ್ಪ ಕಪ್ಪಾಗುವವರೆಗು ಸುಟ್ಟುಕೊಂಡು ನಂತರ ಅದರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
ನಂತರ ಮಿಕ್ಸಿಯಲ್ಲಿ ದನಿಯಾ, ಉಪ್ಪು, ಬ್ಯಾಡಗಿ ಮೆಣಸನ್ನು ನೀರು ಹಾಕದೆ ಸ್ವಲ್ಪ ಪುಡಿಮಾಡಿಕೊಳ್ಳಿ. ಆಮೇಲೆ ಬೆಳ್ಳುಳ್ಳಿ ಹಾಕಿ ಮತ್ತೆ ಪುಡಿಮಾಡಿ. ನಂತರ ಅದಕ್ಕೆ ತೆಂಗಿನತುರಿ, ಟೊಮೊಟ ಹಾಗು ಸ್ವಲ್ಪ ನೀರು ಹಾಕಿ  ತರಿತರಿಯಾಗಿ ರುಬ್ಬಿ.ಉಪ್ಪು ಬೇಕಾದಲ್ಲಿ ಹಾಕಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments