Publish Date: Thu, 27 Sep 2018 (09:01 IST)
Updated Date: Thu, 27 Sep 2018 (09:03 IST)
ಬೆಂಗಳೂರು: ಮದುವೆಯಾಗುವ ಮೊದಲು ತಮ್ಮ ಸಂಗಾತಿಗೂ ತಮಗೂ ಎಷ್ಟು ವರ್ಷ ವಯಸ್ಸಿನ ಅಂತರವಿರಬೇಕು ಎಂಬ ಕನ್ ಫ್ಯೂಷನ್ ನಿಮ್ಮ ಮನಸ್ಸಲ್ಲಿದೆಯೇ? ಹಾಗಿದ್ದರೆ ಈ ಲೇಖನ ಓದಿ.
ಅಟ್ಲಾಂಟಾದ ವಿವಿಯೊಂದು 3000 ಕ್ಕೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಿ ವರದಿಯೊಂದನ್ನು ತಯಾರಿಸಿದ್ದು, ಗಂಡ-ಹೆಂಡಿರ ನಡುವೆ ಎಷ್ಟು ವಯಸ್ಸಿನ ಅಂತರವಿದ್ದರೆ ಚೆನ್ನ ಎಂದು ಹೇಳಿದೆ.
20 ವರ್ಷಕ್ಕೂ ಹೆಚ್ಚು ವರ್ಷ ವಯಸ್ಸಿನ ಅಂತರವಿದ್ದರೆ ಡಿವೋರ್ಸ್ ಆಗುವ ಸಂಭವ ಶೇ.95 ಕ್ಕೂ ಹೆಚ್ಚಂತೆ. ಅದೇ ನಮ್ಮಲ್ಲಿ ಸಾಮಾನ್ಯವಾಗಿ 10 ವರ್ಷ ಗ್ಯಾಪ್ ಇರುವವರೇ ಹೆಚ್ಚಿದ್ದಾರೆ. ಇಂತಹವರಲ್ಲಿ ವಿಚ್ಛೇದನ ಪ್ರಮಾಣ ಶೇ.39 ರಷ್ಟಿರುತ್ತದಂತೆ.
ಎಲ್ಲಕ್ಕಿಂತ ಬೆಸ್ಟ್ ಏಜ್ ಗ್ಯಾಪ್ ಯಾವುದು ಹಾಗಿದ್ದರೆ? ಸಮೀಕ್ಷೆ ಪ್ರಕಾರ ಒಂದು ವರ್ಷ ಅಂತರವಿರುವುದು ಬೆಸ್ಟ್. ಇಂತಹವರಲ್ಲಿ ವಿಚ್ಛೇದನ ಪ್ರಮಾಣ ತೀರಾ ಕಡಿಮೆ. ಇಂತಹವರು ಸುಖ ಜೀವನ ನಡೆಸುತ್ತಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.