ಸೆಕ್ಸ್ ಲೈಫ್ ಬಗ್ಗೆ ಪತಿ ಗೆಳೆಯರ ಜತೆ ಚರ್ಚಿಸುತ್ತಾನಲ್ಲ! ಏನ್ಮಾಡೋದು?

Webdunia
ಶನಿವಾರ, 1 ಸೆಪ್ಟಂಬರ್ 2018 (09:24 IST)
ಬೆಂಗಳೂರು: ಕೆಲವು ಪುರುಷರು ಗೆಳೆಯರನ್ನು ತಮ್ಮ ಸಾಂಸಾರಿಕ ವಿಚಾರಗಳಲ್ಲೂ ಮೂಗು ತೂರಿಸಲು ಬಿಡುತ್ತಾರೆ. ಇವರಿಂದಾಗಿ ಪತ್ನಿಗೆ ಕಿರಿ ಕಿರಿಯಾಗುವುದು ಸಹಜ.

ಎಲ್ಲಾ ಬಿಡಿ, ಪತಿ ತನ್ನ ಪತ್ನಿಯ ಜತೆಗಿನ ಸೆಕ್ಸ್ ಲೈಫ್ ಬಗ್ಗೆ ಗೆಳೆಯರೊಂದಿಗೆ ಚರ್ಚಿಸಿದರೆ ಏನ್ಮಾಡೋದು? ಕೆಲವು ಪತ್ನಿಯರಿಗೆ ಇಂತಹ ಸಮಸ್ಯೆಗಳಿರುತ್ತವೆ. ಅದಕ್ಕೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಲು ಯತ್ನಿಸಿ.

ಪತಿ ಎಂತಹ ವಿಚಾರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಮೊದಲು ನೋಡಿ. ಒಂದು ವೇಳೆ ಆತ ನಿಮ್ಮಿಂದ ತೃಪ್ತಿ ಸಿಗುತ್ತಿಲ್ಲ ಎನ್ನುವ ರೀತಿಯಲ್ಲಿ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದರೆ, ನೀವೇ ಪತಿ ಜತೆ ಕೂತು ಇದಕ್ಕೆ ಕಾರಣ ಪತ್ತೆ ಮಾಡಿ. ಆತನಿಗೆ ನೀವು ಯಾವ ರೀತಿ ಇದ್ದರೆ ಚೆನ್ನ ಎಂದು ತಿಳಿದುಕೊಂಡು ನಿಮ್ಮ ಇಷ್ಟವನ್ನೂ ಹಂಚಿಕೊಂಡು ಒಬ್ಬರಿಗೊಬ್ಬರು ಬೇಕಾದಂತೆ ನಡೆದುಕೊಳ್ಳಿ.

ಒಂದು ವೇಳೆ ನಿಮ್ಮ ಜತೆ ಕಳೆದ ರಸ ನಿಮಿಷಗಳನ್ನು ಸ್ನೇಹಿತರ ಜತೆ ವರ್ಣಿಸುತ್ತಾನೆಂದರೆ, ಸ್ನೇಹಿತರಿಗಿಂತ ಮೊದಲು ನೀವೇ ಪತಿಯ ಉತ್ತಮ ಸ್ನೇಹಿತರಾಗಿ! ಆತ ರಸಗಳಿಗೆಗಳ ಕುರಿತು ನಿಮ್ಮ ಜತೆಯೇ ಮೆಲುಕು ಹಾಕುವಂತಹ ವಾತಾವರಣ ನಿರ್ಮಿಸಿ. ಬೇಕೆಂದೇ ರೊಮ್ಯಾನ್ಸ್ ಬಗ್ಗೆ ಆತನೊಂದಿಗೆ ಮಾತನಾಡಿ. ನೀವು ಕಳೆದ ಕ್ಷಣಗಳನ್ನು ಹಂಚಿಕೊಳ್ಳಲು ಅವಕಾಶ ಕೊಡಿ. ಹಾಗೆ ಮಾಡುವುದರಿಂದ ನಿಮ್ಮ ಸಂಸಾರದ ಗುಟ್ಟು ನಿಮ್ಮಲ್ಲೇ ಉಳಿಯಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ
Show comments