Webdunia - Bharat's app for daily news and videos

Install App

ಮಿಲನ ಕ್ರಿಯೆಗೆ ಅಡ್ಡಿಮಾಡುವ ಈ ಅಡೆತಡೆಯ ಬಗ್ಗೆ ತಿಳಿದುಕೊಳ್ಳಿ

Webdunia
ಗುರುವಾರ, 6 ಸೆಪ್ಟಂಬರ್ 2018 (09:13 IST)
ಬೆಂಗಳೂರು: ಸಂಗಾತಿ ಜತೆ ರೊಮ್ಯಾಂಟಿಕ್ ಸಮಯ ಕಳೆಯಲು ಸಾಧ್ಯವಾಗದೇ ಹೋದಲ್ಲಿ ಪತಿ-ಪತ್ನಿಯ ಸಂಬಂಧದಲ್ಲಿ ಸಹಜವಾಗಿ ಬಿರುಕು ಮೂಡುತ್ತದೆ. ರೊಮ್ಯಾನ್ಸ್ ಗೆ ಅಡ್ಡಿ ಮಾಡುವ ಕೆಲವು ವಿಚಾರಗಳು ಯಾವುವು ನೋಡೋಣ.

ಒತ್ತಡ
ಮಿಲನ ಕ್ರಿಯೆ ಎನ್ನುವುದು ಕೇವಲ ದೇಹದ ಕೂಡುವಿಕೆ ಅಲ್ಲ. ಮನಸ್ಸೂ ಒಂದಾದರೆ ಮಾತ್ರ ಸಂತೋಷ ಸಿಗಬಹುದು. ಮಾನಸಿಕ ಒತ್ತಡಗಳು, ಖಿನ್ನತೆಯಂತಹ ಸಮಸ್ಯೆ ಲೈಂಗಿಕ ಜೀವನವನ್ನು ಹದಗೆಡಿಸುತ್ತದೆ.

ಔಷಧಗಳು
ಕೆಲವೊಂದು ಔಷಧಗಳು ಲೈಂಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಮತ್ತು ಇದರಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇವುಗಳಿಂದ ದೂರವಿರಿ.

ದೇಹ ಸೌಂದರ್ಯ
ದೇಹ ಸಿರಿಯ ಬಗೆಗಿನ ಕೆಲವು ತಪ್ಪು ಕಲ್ಪನೆಗಳು ಸಹಜ ಲೈಂಗಿಕ ಜೀವನಕ್ಕೆ ಅಡ್ಡಿ ಮಾಡುತ್ತವೆ. ಅನಗತ್ಯವಾಗಿ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದನ್ನು ಬಿಡಿ.

ಮಕ್ಕಳು
ಮಕ್ಕಳಾದ ಮೇಲೆ ದಂಪತಿಗಳಲ್ಲಿ ಲೈಂಗಿಕ ಜೀವನ ಮೊದಲಿನಂತೆ ಇರದು. ಹೊಸ ಜೀವನಕ್ಕೆ ಹೊಂದಿಕೊಳ‍್ಳುವ ಭರದಲ್ಲಿ, ಮಕ್ಕಳಿಗಾಗಿ ಸಮಯ ಮೀಸಲಿಡಬೇಕಾದ ಒತ್ತಡದಲ್ಲಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀರಿ. ಹೀಗಾಗಿ ಆಗಾಗ ಹೊರಗಡೆ ಪ್ರವಾಸ, ಪಿಕ್ ನಿಕ್ ಹೋಗುತ್ತಾ ದಾಂಪತ್ಯ ಜೀವನದ ಸುಖ ಪಡೆಯಬಹುದು.

ಕೆಲಸದ ಒತ್ತಡ
ರಾತ್ರಿ ಪಾಳಿ, ಅಥವಾ ಕಚೇರಿಯ ಕೆಲಸಗಳನ್ನೂ ಮನೆಗೂ ಹೊತ್ತೊಯ್ಯುವುದು ಲೈಂಗಿಕ ಜೀವನಕ್ಕೆ ಕತ್ತರಿ ಹಾಕುತ್ತದೆ. ಹೀಗಾಗಿ ಸಿಗುವ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದೆಂದು ಸಂಗಾತಿ ಜತೆ ಚರ್ಚಿಸಿ ರೊಮ್ಯಾಂಟಿಕ್ ಜೀವನ ನಡೆಸಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ