Publish Date: Thu, 06 Sep 2018 (09:15 IST)
Updated Date: Thu, 06 Sep 2018 (09:17 IST)
ಬೆಂಗಳೂರು: ಲೈಂಗಿಕತೆ ಬಗ್ಗೆ ನೇರವಾಗಿ ತನ್ನ ಸಂಗಾತಿ ಬಳಿ ಹೇಳಿಕೊಳ್ಳಲು ಮಹಿಳೆಯರಿಗೆ ಸಂಕೋಚ ಅಡ್ಡಿಬರಬಹುದು. ಇಂತಹ ಸಂದರ್ಭದಲ್ಲಿ ಪುರುಷ ಸಂಗಾತಿಯನ್ನು ಮಧುಮಂಚಕ್ಕೆ ಕರೆಯಲು ಕೆಲವೊಂದು ಪರೋಕ್ಷ ಉಪಾಯಗಳಿವೆ.
ಸಿನಿಮಾ ನೋಡಿ
ನೇರವಾಗಿ ರೊಮ್ಯಾನ್ಸ್ ಮಾಡಲು ಇಳಿಯಬೇಡಿ. ಆತನ ಜತೆಗೆ ರೊಮ್ಯಾಂಟಿಕ್ ಸಿನಿಮಾ ನೋಡಿ. ಇದರಿಂದ ಆತನ ಮೂಡ್ ಬದಲಾಗಬಹುದು.
ಲೈಟಾಗಿ ಮಾತನಾಡಿ
ಗಂಡ-ಹೆಂಡಿರ ಮಧ್ಯೆ ಲೈಟ್ ಹರಟೆ, ಎಲ್ಲೆ ಮೀರಿದ ಮಾತುಗಳಾಡುವುದಕ್ಕೆ ಅಭ್ಯಂತರವಿಲ್ಲ. ಇದರಿಂದ ಇಬ್ಬರ ಭಾವನೆಗಳೂ ಅರಳಬಹುದು.
ಇಷ್ಟದ ಕೆಲಸ ಮಾಡಿ
ಸಣ್ಣ ಪುಟ್ಟ ಸರ್ಪ್ರೈಸ್ ಗಳು ಅಚ್ಚರಿಯ ಫಲಿತಾಂಶ ನೀಡುತ್ತದೆ ಎನ್ನುವುದನ್ನು ಮರೆಯಬೇಡಿ. ಆತನಿಗೆ ಇಷ್ಟವಾಗುವ ಕೆಲಸ ಮಾಡಿ ಅಚ್ಚರಿ ನೀಡಿ. ಆ ಸಂತೋಷ ನಿಮ್ಮಿಬ್ಬರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.