Select Your Language

Notifications

webdunia
webdunia
webdunia
webdunia

ವ್ಯಾಪಕ ಮಳೆ; ಮತ್ತೊಂದು ಚಂಡಮಾರುತದ ಭೀತಿ!

ವ್ಯಾಪಕ ಮಳೆ; ಮತ್ತೊಂದು ಚಂಡಮಾರುತದ ಭೀತಿ!
ಬೆಂಗಳೂರು , ಗುರುವಾರ, 25 ನವೆಂಬರ್ 2021 (07:05 IST)
ಬೆಂಗಳೂರು : ಕರ್ನಾಟಕದಲ್ಲಿ ಚಳಿಗಾಲ ಶುರುವಾದರೂ ಮಳೆಗಾಲ ಮಾತ್ರ ಮುಗಿದಿಲ್ಲ. ಅಕಾಲದಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.
ವಿಪರೀತ ಮಳೆಯ ಆರ್ಭಟದಿಂದ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ರಾಜ್ಯಾದ್ಯಂತ ನವೆಂಬರ್ 28ರವರೆಗೂ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಹಾವೇರಿಯಲ್ಲಿ ಮಳೆ ಹೆಚ್ಚಾಗಲಿದೆ. ಇಂದಿನಿಂದ 4 ದಿನಗಳ ಕಾಲ ಕರ್ನಾಟಕ, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಈ ಅವಧಿಯಲ್ಲಿ ಕರಾವಳಿ ಕರ್ನಾಟಕದಲ್ಲಿಯೂ ಸಹ ಭಾರೀ ಮಳೆಯಾಗಲಿದೆ. ಇಂದು ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 26ರವರೆಗೆ ಬೆಳಗಳೂರಿನಲ್ಲಿ ಮಳೆಯಾಗಲಿದೆ. ಮುಂದಿನ 4 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ನಲ್ಲಿ ಮಳೆಯಾಗಲಿದೆ. ಇಂದು ಮತ್ತು ನಾಳೆ ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು Iಒಆ ಮುನ್ಸೂಚನೆ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಮೊದಲ ಏಟಿಏಂ ಉದ್ಘಾಟನೆ