Select Your Language

Notifications

webdunia
webdunia
webdunia
webdunia

ಫ್ರೆಶ್ ತರಕಾರಿ ಇಲ್ಲ, ರೇಟೂ ಜಾಸ್ತಿ!

ಫ್ರೆಶ್ ತರಕಾರಿ ಇಲ್ಲ, ರೇಟೂ ಜಾಸ್ತಿ!
ಬೆಂಗಳೂರು , ಬುಧವಾರ, 24 ನವೆಂಬರ್ 2021 (08:55 IST)
ಬೆಂಗಳೂರು: ಕರ್ನಾಟಕ, ತಮಿಳುನಾಡು, ಆಂಧ‍್ರ ಸೇರಿದಂತೆ ಕಳೆದ ಎರಡು ವಾರಗಳಿಂದ ಅಕಾಲಿಕವಾಗಿ ಸುರಿದ ಮಳೆ ರೈತರಿಗೆ ಸಾಕಷ್ಟು ನಷ್ಟವುಂಟು ಮಾಡಿದೆ.

ಸಾಕಷ್ಟು ಕಡೆ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಇದರಿಂದಾಗಿ ತರಕಾರಿ, ಅಗತ್ಯ ವಸ್ತುಗಳ ಮೇಲೂ ಬೆಲೆ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಅಬ್ಬಬ್ಬಾ ಎಂದರೆ 30 ರೂ.ಗೆ ಸಿಗುತ್ತಿದ್ದ ಟೊಮೆಟೋ ದರ ಈಗ 120 ರ ಗಡಿ ತಲುಪಿದೆ. ಅದೂ ಉತ್ತಮ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಎಲ್ಲಾ ತರಕಾರಿ ದರವೂ ಗಗನಕ್ಕೇರಿದೆ. ಹೊರ ರಾಜ್ಯಗಳಿಂದ ಬರುತ್ತಿದ್ದ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದೂ ಇದಕ್ಕೆ ಕಾರಣ. ಇದೀಗ ಮತ್ತೆ ಮಳೆ ಭೀತಿಯಿದ್ದು, ಹೀಗೇ ಮುಂದುವರಿದರೆ ರೈತರ ಜೊತೆಗೆ ಸಾಮಾನ್ಯ ಜನರ ಬದುಕೂ ಸಂಕಷ್ಟಕ್ಕೀಡಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಮಳೆ: ಆಂಧ್ರದಲ್ಲಿ ಅಲ್ಲೊಲ ಕಲ್ಲೊಲ…!