Select Your Language

Notifications

webdunia
webdunia
webdunia
Monday, 7 April 2025
webdunia

ನಾಯಿ ಕಚ್ಚಿದ ವ್ಯಕ್ತಿಗೆ ಲಸಿಕೆ ಹಾಕಿದ್ದಾದ್ರು ಯಾಕೆ?

ಕೋವಿಡ್
ನವದೆಹಲಿ , ಮಂಗಳವಾರ, 2 ನವೆಂಬರ್ 2021 (17:20 IST)
ದೇಶದಲ್ಲಿ ನೂರು ಕೋಟಿಗೂ ಹೆಚ್ಚು ಡೋಸ್ ಕೊರೋನಾ ವ್ಯಾಕ್ಸಿನ್ ನೀಡಲಾಗಿದೆ.  ಮೊದಲು ಲಸಿಕೆ ಬಂದಾಗ ಜನ ಬೆಚ್ಚಿ ಬೀಳುತ್ತಿದ್ದರು.
ಈಗಲೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದರೆ ಓಡಿ ಹೋಗುವ ಜನರು ಇದ್ದಾರೆ. ಆದರೂ ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೂ ವ್ಯಾಕ್ಸಿನೇಷನ್ ವೇಳೆ ಅಲ್ಲಲ್ಲಿ ಕೆಲ ಎಡವಟ್ಟುಗಳು ನಡೆದಿವೆ. ವ್ಯಾಕ್ಸಿನ್ ಬದಲಾಗಿ ಖಾಲಿ ಸೂಜಿಯನ್ನು ಚುಚ್ಚಿದ ಪ್ರಕರಣಗಳು ನಡೆದಿವೆ. ಕೆಲವೊಂದು ಭಾರಿ ವೈದ್ಯರು ಹಾಗೂ ನರ್ಸ್ ಗಳು ಒತ್ತಡದಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ರೇಬಿಸ್ ವ್ಯಾಕ್ಸಿನ್ ಪಡೆಯಲು ಬಂದಿದ್ದ. ಆದರೆ ಈತನಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಜಾರ್ಖಂಡ್ ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಜಾರ್ಖಂಡ್ ನ ಪಲಾಮು ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿಈ ಘಟನೆ  ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜಕುಮಾರ್ ಸಮಾಧಿಗೆ ಹಾಲು ತುಪ್ಪ ಕಾರ್ಯ