Select Your Language

Notifications

webdunia
webdunia
webdunia
webdunia

ಒಮಿಕ್ರಾನ್‍ಗೆ ಯಾವ ಲಸಿಕೆ ಮದ್ದು..!

ಒಮಿಕ್ರಾನ್‍ಗೆ ಯಾವ ಲಸಿಕೆ ಮದ್ದು..!
ಹೊಸದಿಲ್ಲಿ , ಮಂಗಳವಾರ, 30 ನವೆಂಬರ್ 2021 (08:02 IST)
ಹೊಸ ದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಒಮಿಕ್ರಾನ್ಗೂ ಲಸಿಕೆಯೇ ಮದ್ದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದರಿಂದ ನೂತನ ರೂಪಾಂತರಿ ಮೂಡಿಸಿದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
'ಒಮಿಕ್ರಾನ್ ರೂಪಾಂತರಿಯು ಅಪಾಯಕಾರಿಯಾಗಿದ್ದು, ಕ್ಷಿಪ್ರವಾಗಿ ಪಸರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.

ಕೊರೊನಾ ದೀರ್ಘಕಾಲೀನ ಸಮಸ್ಯೆಯಾಗಿರುವುದರಿಂದ ಜಗತ್ತಿನಾದ್ಯಂತ ಈಗ ಲಸಿಕೆಯೇ ರೂಪಾಂತರಿಗಳ ವಿರುದ್ಧ ಹೋರಾಡುವ ನಿರ್ಣಾಯಕ ಅಸ್ತ್ರ' ಎಂದು ತಜ್ಞರು ವಿವರಿಸಿದ್ದಾರೆ.
ಒಮಿಕ್ರಾನ್ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.
ಇದು ಕ್ಷಿಪ್ರವಾಗಿ ಹರಡಿದರೂ, ಕೊರೊನಾ ನಿರೋಧಕ ಲಸಿಕೆಯಿಂದ ನಿಯಂತ್ರಿಸಬಹುದಾಗಿದೆ' ಎಂದು ರಾಷ್ಟ್ರೀಯ ರೋಗ ನಿರೋಧಕ ಸಂಸ್ಥೆ (ಎನ್ಐಐ) ವಿಜ್ಞಾನಿ ಸತ್ಯಜಿತ್ ರಾಥ್ ತಿಳಿಸಿದ್ದಾರೆ.
ಕೋಲ್ಕೊತಾದ ಸಿಎಸ್ಐಆರ್ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) ಹಿರಿಯ ವಿಜ್ಞಾನಿ ಉಪಾಸನಾ ರಾಯ್ ಅವರು ಸಹ ಲಸಿಕೆಗಳ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.
'ದೇಶದಲ್ಲಿ ಲಸಿಕೆ ವಿತರಣೆಗೆ ಮತ್ತಷ್ಟು ವೇಗ ನೀಡಬೇಕು. ಜನರು ಸಹ ಕೇಂದ್ರ ಸರಕಾರದ ಮಾರ್ಗಸೂಚಿ ಪಾಲಿಸಬೇಕು. ಆದಾಗ್ಯೂ, ಈಗಾಗಲೇ ದೇಶದಲ್ಲಿ ಹೆಚ್ಚಿನ ಜನ ಕನಿಷ್ಠ ಒಂದು ಡೋಸ್ ಪಡೆದಿರುವುದರಿಂದ ಹೆಚ್ಚಿನ ಆತಂಕವಿಲ್ಲ' ಎಂದು ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಕೆಲವೆಡೆ ಮಳೆ ಮುಂದುವರಿಕೆ!