Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹೆಚ್ಚಳ ಊರುಗಳತ ಹೊರಟ ಕಾರ್ಮಿಕರು

ಕೊರೊನಾ ಭೀತಿ ಹೆಚ್ಚಳ ಊರುಗಳತ ಹೊರಟ ಕಾರ್ಮಿಕರು
ಬೆಂಗಳೂರು , ಸೋಮವಾರ, 29 ನವೆಂಬರ್ 2021 (16:38 IST)
ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಮಾಡುತ್ತಾರೆ ಎಂಬ ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಅತಂಕಕ್ಕೆ ಒಳಗಾಗಿದ್ದಾರೆ. ಹೊರ ರಾಜ್ಯಗಳ ಕೆಲಸಗಾರರು ಮತ್ತೆ ಬೆಂಗಳೂರು ತೊರೆಯಲಾರಂಭಿಸಿದ್ದಾರೆ.
 
ರೈಲು ನಿಲ್ದಾಣ ಹಾಗೂ ಹೊರ ರಾಜ್ಯದ ಬಸ್ ಗಳನ್ನು ಬುಕ್ಕಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ.ಇದರ ನಡುವೆ ಕಟ್ಟು ನಿಟ್ಟಿನ ನಿಯಮ ಹೊರತು ಪಡಿಸಿ ಯಾವುದೇ ಲಾಕ್‌ಡೌನ್ ಜಾರಿಯಿಲ್ಲ ಎಂದು ಆರೋಗ್ಯ ಸಚಿವರ ಕಾರ್ಯಾಲಯ ಸ್ಪಷ್ಟಪಡಿಸಿದೆ.
 
ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಮತ್ತೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಬಿಗಿಗೊಳಿಸುತ್ತಿವೆ. ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಹೊರ ದೇಶಗಳಿಂದ ಭಾರತಕ್ಕೆ ಬರುವ ಪ್ರಜೆಗಳ ಕಡ್ಡಾಯ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲೂ ಸಹ ಹೊರ ದೇಶಗಳಿಂದ ಬರುವರ ಮೇಲೆ ಹೆಚ್ಚಿನ ನಿಗಾ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
 
ಅದರಂತೆ ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೈನಾ, ನ್ಯೂಜಿಲಾಂಡ್, ಜಿಂಬಾಂಬ್ವೆ, ಸಿಂಗಪೂರ್, ಹಾಂಕಾಂಗ್ ಮತ್ತು ಇಸ್ರೇಲ್ ಮತ್ತಿತರ ರಾಷ್ಟ್ರಗಳಿಂದ ಬರುವರ ಮೇಲೆ ಪೋಸ್ಟ್ ಕೋವಿಡ್ ಪರೀಕ್ಷೆ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮ ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಓಮಿಕ್ರಾನ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಅನೇಕ ರಾಷ್ಟ್ರಗಳು ಸುರಕ್ಷತಾ ಕ್ರಮ ಬಿಗಿಗೊಳಿಸಲು ಮುಂದಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ನಕಲಿ ಮಾರ್ಕ್ಸ್ ಕಾರ್ಡ್