Publish Date: Wed, 29 Dec 2021 (07:11 IST)
Updated Date: Wed, 29 Dec 2021 (09:14 IST)
ಬೆಂಗಳೂರು : ಕರ್ನಾಟಕ ಬಂದ್ಗೆ ಎರಡೇ ದಿನ ಬಾಕಿ ಉಳಿದಿದ್ದು, ಹಲವು ವಲಯಗಳಿಂದ ಇನ್ನೂ ಪರಿಪೂರ್ಣ ಬೆಂಬಲ ಸಿಕ್ಕಿಲ್ಲ.
ಈ ಪರಿಣಾಮ ಬಂದ್ ಯಶಸ್ವಿಗೊಳಿಸೋಕೆ ಕನ್ನಡಪರ ಸಂಘಟನೆಗಳು ಹರಸಾಹಸ ಪಡುತ್ತಿವೆ.
ಡಿ.31ರ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ಆದರೆ ಅದಕ್ಕೆ ಎಲ್ಲ ಕಡೆಯಿಂದ ಸಂಪೂರ್ಣ ಬೆಂಬಲ ಸಿಕ್ಕಿಲ್ಲ. ಪರಿಣಾಮ ಕನ್ನಡಪರ ಸಂಘಟನೆಗಳು ಬಂದ್ ಯಶಸ್ವಿಗೊಳಿಸೋಕೆ ಪಣತೊಟ್ಟಿವೆ.
ಬಂದ್ ಗೆ ಬೆಂಬಲ ಕೋರಿ ಕೆಲ ಸಂಘಟನೆಗಳಿಂದ ರ್ಯಾಲಿ ಮಾಡುತ್ತಿವೆ. ಮತ್ತೆ ಕೆಲ ಸಂಘಟನೆಗಳಿಂದ ಬಂದ್ ಗೆ ಬೆಂಬಲ ಬೇಡ ಎಂದು ತೀರ್ಮಾನಿಸಲು ಇಂದು ಸಭೆ ಕರೆಯಲಾಗಿದೆ.
ಹೋಟೆಲ್, ಪಬ್, ಬಾರ್ ಮಾಲೀಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ತಿಳಿಸಿವೆ. ಹೀಗಾಗಿ ಕನ್ನಡಪರ ಸಂಘಟನೆಗಳು ನೈತಿಕ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ.