ಬೆಂಗಳೂರು : ದೆಹಲಿಯ ರಾಜಪಥ್ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ನಲ್ಲಿ ಗಮನಸೆಳೆದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ದೊರೆತಿದೆ.
ಪರೇಡ್ನಲ್ಲಿ ಉತ್ತಮವಾಗಿ ಪ್ರದರ್ಶನಗೊಂಡ ರಾಜ್ಯಗಳ ಸ್ತಬ್ಧಚಿತ್ರಗಳ ಪೈಕಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕರೆ, ದ್ವಿತೀಯ ಸ್ಥಾನ ಕರ್ನಾಟಕ್ಕೆ ದೊರೆತಿದೆ. ಮೇಘಾಲಯಕ್ಕೆ ತೃತೀಯ ಸ್ಥಾನ ನೀಡಲಾಗಿದೆ.
ಉತ್ತಮ ಪರೇಡ್ ನಡೆಸಿದ ಮೂರು ಸೈನ್ಯ ಪಡೆಗಳ ಪೈಕಿ ನೌಕಾಪಡೆಯ ಮಾರ್ಚಿಂಗ್ ಕಾಂಟಿಜೆಂಟ್ ಪ್ರಥಮ ಸ್ಥಾನ ಪಡೆದಿದೆ, ಇತರ ಕಾಂಟಿಜೆಂಟ್ಗಳ ಪೈಕಿ ಸಿಐಎಸ್ಎಫ್ ಕಾಂಟಿಜೆಂಟ್ಗೆ ದ್ವಿತೀಯ ಸ್ಥಾನ ನೀಡಲಾಗಿದೆ.
ಕೇಂದ್ರ ಸಚಿವಾಲಯದ ಸ್ತಬ್ಧಚಿತ್ರಗಳ ಪೈಕಿ ಶಿಕ್ಷಣ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಜಂಟಿ ಅಗ್ರಸ್ಥಾನ ಪಡೆದುಕೊಂಡಿದೆ.
ಜಾನಪದ ತಜ್ಞ ಡಾ.ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡ ಯಕ್ಷಗಾನ ಪಾತ್ರಗಳಲ್ಲಿ ಹೆಜ್ಜೆ ಹಾಕಿ ರಾಜ್ಪಥ್ನಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದರು.