Select Your Language

Notifications

webdunia
webdunia
webdunia
webdunia

ಒಂದು ನಗರ 19 ಸಾವು ರಾಜಧಾನಿಯಲ್ಲಿನ ಘೋರ

ಒಂದು ನಗರ 19 ಸಾವು ರಾಜಧಾನಿಯಲ್ಲಿನ ಘೋರ
ಬೆಂಗಳೂರು , ಗುರುವಾರ, 3 ಫೆಬ್ರವರಿ 2022 (20:19 IST)
ಒಂದು ತಿಂಗಳು…ಒಂದು ನಗರ… 19 ಸಾವು…! ಇತ್ತೀಚಿನ ದಿನಗಳಲ್ಲಿ ಬೆಂಗ ಳೂರು ಅಪಘಾತಗಳ ರಾಜಧಾನಿಯಾಗುತ್ತಿದೆ. ಅದರಲ್ಲೂ ಭಾರೀ ವಾಹನಗಳ ಅಜಾಗರೂಕತೆ ಸಾಲು ಸಾಲು ಸಾವುಗಳಿಗೆ ಕಾರಣವಾಗುತ್ತಿದೆ. ನಗರದಲ್ಲಿ ಲಾರಿ, ಟ್ರಕ್‌ ಗಳಂಥ ಭಾರಿ ವಾಹನಗಳು ನಗರದ ಜನನಿಬಿಡ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚರಿಸುತ್ತಿದ್ದು, ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ರಿಯಾಲಿಟಿ ಶೋವೊಂದರ ಸ್ಪರ್ಧಿ ಆರು ವರ್ಷದ ಬಾಲಕಿ ಮತ್ತು ಪತ್ರಕ ರ್ತರೊಬ್ಬರು ಲಾರಿಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ಬಳಿಕ, ಭಾರೀ ವಾಹನಗಳು ನಗರದೊಳಗೆ ಬರುತ್ತಿರುವುದು ಹೇಗೆ? ಇವರನ್ನು ಬಿಡುತ್ತಿರುವುದು ಯಾರು ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ. ಜನಸಾಮಾನ್ಯರೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಚಾರಿ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.
 
ಅಲ್ಲದೆ, ಹಗಲು ಹೊತ್ತಿನಲ್ಲಿಯೂ ಎಗ್ಗಿಲ್ಲದೇ ಭಾರೀ ವಾಹನಗಳನ್ನು ಸಂಚಾರಿ ಪೊಲೀಸರೇಕೆ ತಡೆದು ನಿಲ್ಲಿಸುತ್ತಿಲ್ಲ? ಇವರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

3 ತಾಸಿನಲ್ಲಿ ಅಪಹರಣ ಪ್ರಕರಣ ಅಂತ್ಯ