Select Your Language

Notifications

webdunia
webdunia
webdunia
webdunia

ಸರ್ಕಾರದ ಮುಂದಿರುವ ಆಯ್ಕೆಗಳೇನು?

ಸರ್ಕಾರದ ಮುಂದಿರುವ ಆಯ್ಕೆಗಳೇನು?
ಬೆಂಗಳೂರು , ಗುರುವಾರ, 20 ಜನವರಿ 2022 (16:59 IST)
ಬೆಂಗಳೂರು : ವಿಕೆಂಡ್ ಕರ್ಫ್ಯೂಗೆ ವ್ಯಕ್ತವಾಗ್ತಿರುವ ಜನಾಕ್ರೋಶ ಮತ್ತು ಪಕ್ಷದಲ್ಲಿಯೇ ಕೇಳಿಬರುತ್ತಿರುವ ಅಪಸ್ವರದ ಕಾರಣದಿಂದಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.
 

ಸಚಿವ ಸುಧಾಕರ್ ಕೂಡ ರೂಲ್ಸ್ ರಿಲೀಫ್ ಸುಳಿವು ನೀಡಿದ್ದು, ಜನರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ದಿನಕ್ಕೆ 1.25 ಲಕ್ಷ ಕೇಸ್ ಬರಬಹುದು. ಹೀಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಹೈದರಾಬಾದನಲ್ಲೂ ಇಲ್ಲದ ರೂಲ್ಸ್ ಇಲ್ಯಾಕೆ? ಬದುಕಿದ್ದವನರನ್ನು ಸಾಯಿಸುವ ಕೆಲಸ ಮೊದಲು ನಿಲ್ಲಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಆಯ್ಕೆಗಳು ಏನು?

1. ಇಡೀ ರಾಜ್ಯಕ್ಕೆ ಒಂದೇ ಮಾರ್ಗಸೂಚಿ ತರುವುದು
2. ಬೆಂಗಳೂರು ಮತ್ತು ಇತರೆಡೆಗೆ ಪ್ರತ್ಯೇಕ ಮಾರ್ಗಸೂಚಿ
3. ಬೆಂಗಳೂರಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಮುಂದುವರಿಕೆ
4. ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಕೆಲವಕ್ಕೆ ವಿನಾಯ್ತಿ (ಹೊಟೇಲ್, ಎಂಆರ್ಪಿ, ರೆಸ್ಟೋರೆಂಟ್ಗಳಿಗೆ ಕೆಲ ವಿನಾಯಿತಿ. ದಿನಸಿ, ತರಕಾರಿ, ಬೀದಿಬದಿ ವ್ಯಾಪಾರ, ಮಾಂಸ ಮಾರಾಟಕ್ಕೆ ಸಮಯ ನಿಗದಿ)
5. ಸೋಂಕಿಲ್ಲದ ಜಿಲ್ಲೆಗಳಿಗೆ ವೀಕೆಂಡ್ ಕರ್ಫ್ಯೂ ರಿಲೀಫ್ ನೀಡುವುದು
6. ಜಿಲ್ಲಾಧಿಕಾರಿಗಳಿಗೆ ಇನ್ನಷ್ಟು ಮಾರ್ಗಸೂಚಿ ಜಾರಿ ಅಧಿಕಾರ


Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರ ವೀಕೆಂಡ್ ಕರ್ಫ್ಯೂ ಡೌಟ್?