Select Your Language

Notifications

webdunia
webdunia
webdunia
webdunia

ಹಿಜಬ್ ಧರಿಸುವುದು ಮಹಿಳೆಯರ ಆಯ್ಕೆಗೆ ಬಿಡಬೇಕು : ಸರ್ಕಾರ

ಹಿಜಬ್ ಧರಿಸುವುದು ಮಹಿಳೆಯರ ಆಯ್ಕೆಗೆ ಬಿಡಬೇಕು : ಸರ್ಕಾರ
ಬೆಂಗಳೂರು , ಬುಧವಾರ, 23 ಫೆಬ್ರವರಿ 2022 (08:08 IST)
ಬೆಂಗಳೂರು : ಹೈಕೋರ್ಟ್ ಪೂರ್ಣ ಪೀಠದಲ್ಲಿ 8ನೇ ದಿನವೂ ಹಿಜಬ್ ಅರ್ಜಿ ವಿಚಾರಣೆ ಸಂಬಂಧ ಕಾವೇರಿದ ವಾದ ನಡಿಯಿತು.
 
ಇಂದು ಸರ್ಕಾರದ ಪರ ವಕೀಲರು ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. ರಾಜ್ಯದಲ್ಲಿ ಎಲ್ಲಿಯೂ ಹಿಜಬ್ಗೆ ನಿರ್ಬಂಧವಿಲ್ಲ.

ಆದ್ರೆ, ಅದು ಕಡ್ಡಾಯವಾಗಬಾರದು. ಅದನ್ನು ಸಂಬಂಧಿಸಿದ ಮಹಿಳೆಯರ ಆಯ್ಕೆಗೆ ಬಿಡಬೇಕು ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ನಾವದಗಿ ವಾದ ಮಂಡಿಸಿದ್ರು. ನಾವದಗಿಯವರು, ಕುರಾನ್ ಪತ್ರಿಯನ್ನು ನ್ಯಾಯಮೂರ್ತಿಗಳಿಗೆ ನೀಡಿ, ಮಹಿಳೆಯರು ತಮ್ಮ ಸೌಂದರ್ಯ ಅನ್ನು ತೋರಿಸಬಾರದು.

ತಮ್ಮ ಬಳಿ ಇರುವ ದಪ್ಪಟ್ಟದಲ್ಲೇ ತನ್ನ ಸೌಂದರ್ಯ ಮುಚ್ಚಬೇಕು. ಸುರಾ 33 ವಚನ 55ರಲ್ಲಿ ಅಲ್ಲಿ ಈ ರೀತಿ ಉಲ್ಲೇಖ ಇದೆ ಎಂದು ಎಜಿ ಹೇಳಿದರು. 

ಫ್ರಾನ್ಸ್ನಲ್ಲಿ ಹಿಜಬ್ ಸಂಪೂರ್ಣ ನಿಷೇಧವಾಗಿದೆ. ಹಿಜಬ್ ಇಲ್ಲದಯೇ ಇಸ್ಲಾಂ ಉಳಿಯಬಹುದು. ಮಸೀದಿಯಲ್ಲಿ ನಮಾಜ್ ಮಾಡುವುದು ಮೂಲಭೂತ ಹಕ್ಕಲ್ಲ. ಬಾಬ್ರಿ ಮಸೀದಿ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಧರ್ಮದ ಮೂಲಭೂತ ಆಚರಣೆಗಷ್ಟೇ ಧಾರ್ಮಿಕ ಹಕ್ಕಿನಲ್ಲಿ ರಕ್ಷಣೆ ಇದೆ. ನಮಾಜ್ಗೆ ಮಸೀದಿ ಅವಿಭಾಜ್ಯ ಅಲ್ಲ.

ನಮಾಜ್ ಅನ್ನು ಎಲ್ಲಿ ಬೇಕಾದ್ರೂ ಸಲ್ಲಿಸಬಹುದು. ನಮ್ಮ ದೇಶದಲ್ಲಿ ಹಿಜಬ್ ಧರಿಸೋದು ಪ್ರಮುಖ ಅಲ್ಲ. ಶಿಸ್ತು ಅನ್ನುವ ಜಾಗದಲ್ಲಿ ಕೆಲವೊಂದು ತಡೆ ನೀಡಲಾಗಿದೆ ಎಂದು ವಾದಿಸಿದರು.

ಹಿಜಬ್ ಧರಿಸೋದು ಕೂಡ ಮಹಿಳೆಯರ ಆಯ್ಕೆ ಆಗಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಇದೆಲ್ಲ ಬರಬೇಕು. ಕೋರ್ಟ್ ಮೆಟ್ಟಿಲೇರಿದವರು ಶಿಕ್ಷಣ ಕಾಯ್ದೆಯನ್ನು ಪ್ರಶ್ನೆ ಮಾಡಿಲ್ಲ. ಶಿಕ್ಷಣ ಕಾಯ್ದೆ ಹೇಳೋದು ಸಮವಸ್ತ್ರವನ್ನು ಧರಿಸಬೇಕೆಂದು. ಜಾತ್ಯಾತೀತ ಮನೋಭಾವ ಬೆಳೆಸಬೇಕು ಎಂಬುದು ಸಮವಸ್ತ್ರದ ಉದ್ದೇಶ ಎಂದು ವಾದ ಮಂಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೂ ಕುಸಿತ : ಆತಂಕದಲ್ಲಿ ಗ್ರಾಮಸ್ಥರು