Select Your Language

Notifications

webdunia
webdunia
webdunia
webdunia

ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುತ್ತೇವೆ; ಸುಧಾಕರ್

ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುತ್ತೇವೆ; ಸುಧಾಕರ್
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (13:49 IST)
ಬೆಂಗಳೂರು(ಆ.30): ಇವತ್ತು ಕೊವೀಡ್ ಸಭೆ ಕರೆದಿದ್ದೆವು. ಲಸಿಕೆ ವಿಚಾರವಾಗಿ ಸಭೆ ನಡೆಸಿದೆವು. ಆಗಸ್ಟ್ ತಿಂಗಳಲ್ಲಿ ಒಂದು ಕೋಟಿ ಹತ್ತು ಲಕ್ಷ ಲಸಿಕೆ ನೀಡಿದ್ದೇವೆ.  ನಾನು ಮತ್ತು ಸಿಎಂ ದೆಹಲಿಯಲ್ಲಿ ಆರೋಗ್ಯ ಸಚಿವರ ಭೇಟಿ ಮಾಡಿದ್ದೆವು. ಅದರ ಪ್ರತಿಫಲವಾಗಿ ಇಷ್ಟೊಂದು ಪ್ರಮಾಣದ ಲಸಿಕೆ ನೀಡಿದ್ದೇವೆ. ಇನ್ಮೇಲೆ ಪ್ರತಿದಿನ ಐದು ಲಸಿಕೆನೀಡುತ್ತೇವೆ. ಅದನ್ನು ದ್ವಿಗುಣ ಮಾಡುವ ಗುರಿಯಿದೆ.

ಲಸಿಕಾ ಉತ್ಸವ ಅಂತ ಕಾರ್ಯಕ್ರಮ ಮಾಡುವ ಪ್ಲಾನ್ ಇದೆ.  ಬೆಂಗಳೂರು ಸೇರಿದಂತೆ ಮಹಾನಗರದಲ್ಲಿ ಹೆಚ್ಚು ಲಸಿಕೆ ಹಾಕಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ. ಅದನ್ನು ಸರಿಪಡಿಸಬೇಕಿದೆ. ಬೆಂಗಳೂರಿನ ಸ್ಲಂಗಳಲ್ಲಿ ಲಸಿಕಾ ಉತ್ಸವ ಮಾಡುತ್ತೇವೆ. ಶೀಘ್ರವಾಗಿ ಈ ಕಾರ್ಯಕ್ರಮ ರೂಪಿಸುತ್ತೇವೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚು ಮಾಡುತ್ತಿದ್ದೇವೆ. ಮೊದಲ ಪ್ರಾಶಸ್ತ್ಯ ದಲ್ಲಿ ಲಸಿಕೆ ನೀಡುತ್ತೇವೆ. ರಾಜ್ಯದ ಎಲ್ಲ ಜನತೆಗೆ ಡಿಸೆಂಬರ್ ಅಂತ್ಯದ ಒಳಗೆ ಲಸಿಕೆ ನೀಡುತ್ತೇವೆ.  ಮಕ್ಕಳಿಗೆ ಲಸಿಕೆ ಪರವಾನಿಗೆಗೆ ಕಾಯುತ್ತಿದ್ದೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಮೂರನೆ ಅಲೆ ಬಂದಿಲ್ಲ. ಇನ್ನೂ ಎರಡನೇ ಅಲೆ ಇದೆ. ಮಕ್ಕಳಿಗೂ ಲಸಿಕೆ ಬಗ್ಗೆ ಪರವಾನಗಿ ಸಿಗಬೇಕಿದೆ. ಅನುಮತಿ ಸಿಕ್ಕರೆ ಮಕ್ಕಳಿಗೂ ಲಸಿಕೆ ನೀಡಲಾಗುವುದು. ಕೆಲವು ತಾಂತ್ರಿಕ ಸಮಸ್ಯೆಯಾಗಿದೆ. ಮೊದಲ ಡೋಸ್ ಪಡೆಯುವಾಗ ಒಂದು ನಂಬರ್ ಕೊಡ್ತಾರೆ. 2ನೇ ಡೋಸ್ ವೇಳೆ ಮತ್ತೊಂದು ನಂಬರ್ ನೀಡ್ತಾರೆ. ಜನರ ಈ ನಡೆ ಸಮಸ್ಯೆಯನ್ನ ತಂದಿದೆ.  ಬೆಂಗಳೂರಿನಲ್ಲಿ ಉತ್ತಮ ನಡೆ ತೆಗೆದುಕೊಂಡಿದ್ದೇವೆ. ಸರ್ಕಾರದ ಜೊತೆ ಜನರು ಕೈಜೋಡಿಸಬೇಕು ಎಂದರು.
ಮೂರನೇ ಅಲೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿ ಮೂರನೇ ಅಲೆ ಭಾದಿಸಬಾರದು. ಆರೋಗ್ಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅಲೆ ಎದುರಾಗದಂತೆ ನಾವು ತಡೆಯಬೇಕಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಗಟ್ಟಿ ನಿರ್ಧಾರ ಮಾಡಿದ್ದೇವೆ. 9ರ ನಂತರದ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೇವೆ. 6 ರಿಂದ 8 ರವರೆಗೆ ತರಗತಿ ಆರಂಭವಾಗಬೇಕು. ಇಂದು ಸಭೆಯಲ್ಲಿ ಇದರ ಚರ್ಚೆಯಾಗಿದೆ. ಸಂಜೆ ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸುತ್ತೇವೆ.  ಪೋಷಕರಿಂದಲೂ ಶಾಲೆ ಪ್ರಾರಂಭಕ್ಕೆ ಒತ್ತಡವಿದೆ. ಪ್ರಸ್ತುತ ಶಾಲೆ ತೆರೆದಿರುವುದರಿಂದ ಸಮಸ್ಯೆಯಾಗಿಲ್ಲ. ಹಾಗಾಗಿ 6 ರಿಂದ 8ನೇ ತರಗತಿ ತೆರೆಯುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಸಿಎಂ ಸಭೆಯಲ್ಲಿ ಒಂದು ನಿರ್ಧಾರ ತೆಗೆದುಕೊಳ್ತೇವೆ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

6-8ನೇ ತರಗತಿ ಪ್ರಾರಂಭಕ್ಕೆ ಶಿಕ್ಷಣ ಸಚಿವ ತಜ್ಞರೊಂದಿಗಿನ ಸಭೆ