Select Your Language

Notifications

webdunia
webdunia
webdunia
webdunia

6-8ನೇ ತರಗತಿ ಪ್ರಾರಂಭಕ್ಕೆ ಶಿಕ್ಷಣ ಸಚಿವ ತಜ್ಞರೊಂದಿಗಿನ ಸಭೆ

6-8ನೇ ತರಗತಿ ಪ್ರಾರಂಭಕ್ಕೆ ಶಿಕ್ಷಣ ಸಚಿವ ತಜ್ಞರೊಂದಿಗಿನ ಸಭೆ
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (13:32 IST)
ಚಿಕ್ಕಮಗಳೂರು/ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ಸೋಮವಾರ ತಜ್ಞರ ಸಮಿತಿ ಸಭೆ ನಡೆಯಲಿದ್ದು ಸಭೆಯಲ್ಲಿ 6 ರಿಂದ 8ನೇ ತರಗತಿ ಪ್ರಾರಂಭಕ್ಕೆ ಗ್ರಿನ್ಸಿಗ್ನಲ್ ಸಿಕ್ಕಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗುವುದು. ಸಭೆಯಲ್ಲಿ ತಗೆದುಕೊಳ್ಳುವ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಈಗಾಗಲೇ 9ರಿಂದ 12ನೇ ತಗಗತಿ ಪ್ರಾರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದು, ಬಹುತೇಕ ವಿದ್ಯಾರ್ಥಿಗಳು ಪೂರ್ಣ ಶಾಲೆ ತೆರೆಯುವಂತೆ ನನಗೆ ಮನವಿ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯವಿಲ್ಲದೇ ನಿರ್ಣಯ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಮೊದಲು 6ರಿಂದ 8ವರೆಗೂ, ನಂತರ 1ರಿಂದ 5ನೇ ತರಗತಿ ಪ್ರಾರಂಭಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳು ಮತ್ತು ತಜ್ಞರ ಸಮಿತಿ ಅಭಿಪ್ರಾಯ ಪಡೆದು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಾಲೆ ಪ್ರಾರಂಭದ ನಂತರ ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ಸುಕತೆ ತುಂಬಾ ಚೆನ್ನಾಗಿತ್ತು, ಶಿಕ್ಷಣ ಇಲಾಖೆಯೂ ಕೂಡ ಶಾಲೆ ತೆರೆಯೋಕೆ ಎಲ್ಲಾ ತರಹದ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಗಡಿಭಾಗದ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ 9 ರಿಂದ 12 ವರೆಗೆ ಶಾಲೆ ತೆರೆದಿದ್ದೇವೆ. ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಎಲ್ಲಾ ಮಕ್ಕಳಿಗೂ ಶಾಲೆ ತೆರೆಯಬೇಕೆಂಬುದು ಪೋಷಕರ ಒತ್ತಾಯವಾಗಿದೆ. ಹಾಗಾಗಿ ಸಿಎಂ ಹಾಗೂ ತಜ್ಞರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇನ್ನು ಎಲ್ಲಾ ಜಿಲ್ಲೆಯಲ್ಲಿಯೂ ಈಗಾಗಲೇ ಪಾಸಿಟಿವಿಟಿ ರೇಟ್ ಶೇ 2 ಕ್ಕೆ ಇಳಿದಿದೆ. ಎಲ್ಲಾ ತಾಲೂಕಿನಲ್ಲೂ ಪಾಸಿಟಿವಿಟಿ ರೇಟ್ 1 % ಗೆ ಬಂದು ನಿಂತಿದೆ, ಹಾಗಾಗಿ ಶಾಲೆ ತೆರೆಯೋದು ಒಳ್ಳೆಯದು ಎಂಬ ಅಭಿಪ್ರಾಯಗಳು ಕೇಳಿಬರ್ತಿವೆ ಎಂದರು.
ಬೆಂಗಳೂರಿನಲ್ಲೂ ಅವರು ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಶಾಲೆ ಆರಂಭದ ಬಗ್ಗೆ ಸರಕಾರಕ್ಕಿರುವ ಇಚ್ಛೆಯನ್ನು ತೋರ್ಪಡಿಸಿದರು. ಕೊರೋನಾ ಸೋಂಕಿನ ವೇಗ ಹೆಚ್ಚಿಲ್ಲ. ಶಾಲೆಗಳನ್ನ ಪ್ರಾರಂಭಿಸಲು ಅಡ್ಡಿ ಕಾಣುತ್ತಿಲ್ಲ ಎಂದು ಹೇಳಿದ ಅವರು, ತಾಂತ್ರಿ ಸಲಹಾ ಸಮಿತಿ ನೀಡುವ ಸಲಹೆ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಶಿಕ್ಷೆ ಅಗತ್ಯ:
ಇದೇ ವೇಳೆ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಬಗ್ಗೆ ನಿನ್ನೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಿ ಆ ಯುವಕರು ಹೀನ ಕೃತ್ಯ ಎಸಗಿದ್ದಾರೆ. ಆ ಯುವಕರ ಕೃತ್ಯವನ್ನು ಸಮಾಜ ವಿರೋಧಿಸುವುದು ಸರ್ವೇ ಸಾಮಾನ್ಯ. ಪ್ರಜಾಪ್ರಭುತ್ವದ ದೇಶದಲ್ಲಿ ಹೆದರಿಕೆ ಬರುವಂತಹ ಕಠಿಣ ನಿರ್ಣಯಗಳ ಬರಬೇಕು. ಮೌಲ್ಯಾಧಾರಿತ ಶಿಕ್ಷಣ ಒಂದೇ ಇವುಗಳನ್ನು ತಡೆಯಲು ಇರುವ ಮಾರ್ಗ. ದುರುಳರು ಹೀನಕೃತ್ಯ ಎಸಗಿದ್ದು, ಇಂತಹ ಕೃತ್ಯಗಳ ತಡೆಗೆ ಕಠಿಣ ಕಾನೂನು ಬರಬೇಕು ಎಂದು ಶಿಕ್ಷಣ ಸಚಿವ ನಾಗೇಶ್ ಬಿ.ಸಿ. ಅಭಿಪ್ರಾಯಪಟ್ಟರು.

 

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧಿಕರ ಜೊತೆಗೂಡಿ ಗಂಡನ ಕತೆ ಮುಗಿಸಿದ ಪತ್ನಿ