Publish Date: Mon, 06 Mar 2023 (07:44 IST)
Updated Date: Mon, 06 Mar 2023 (00:45 IST)
ಬೆಂಗಳೂರು : ದೇಶದಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಕೋವಿಡ್ ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ ಆರಂಭವಾಗಿದೆ. ಈ ವಿಚಾರದ ಬಗ್ಗೆ ತಜ್ಞರ ಜೊತೆಗೆ ಮಾರ್ಚ್ 6ರಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದೆ.
ಕೋವಿಡ್ ಎನ್ನುವ ಮಹಾಮಾರಿ ರಾಜ್ಯ ಬಿಟ್ಟು ಬಹುತೇಕ ತೊಲಗಿದೆ. ಆದರೆ ಈಗ ಹೆಚ್3ಎನ್2 ರೂಪದಲ್ಲಿ ಮತ್ತೊಂದು ವೈರಸ್ ದೇಶದ ಜನರಿಗೆ ಕಂಟಕವಾಗಿ ಕಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆಗೆ ಕೇಂದ್ರದಿಂದ ಸಂದೇಶ ರವಾನೆಯಾಗಿದೆ.