Publish Date: Thu, 29 Dec 2022 (09:45 IST)
Updated Date: Wed, 28 Dec 2022 (22:51 IST)
ಬೀಜಿಂಗ್ : ಚೀನಾದಲ್ಲಿ ಕೋವಿಡ್ ಆರ್ಭಟ ನಿಲ್ತಿಲ್ಲ. ದಿನವೂ ಲಕ್ಷಾಂತರ ಮಂದಿ ಸೋಂಕು ಪೀಡಿತರಾಗ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಾಲು ಹೆಚ್ತಿದೆ.
ಶವಾಗಾರಗಳ ಮುಂದೆ ಹೆಣಗಳ ರಾಶಿಯೇ ಬಿದ್ದಿದೆ. ತುಂಬಾ ಕಡೆ ಅಂತ್ಯಕ್ರಿಯೆಗೂ ಕನಿಷ್ಠ 10 ದಿನ ಬೇಕಿದೆಯಂತೆ. ಶಾಂಘೈ ಸಮೀಪದ ಜಿಯಾಂಗ್ನಲ್ಲಿ ದಿನವೊಂದಕ್ಕೆ ಕನಿಷ್ಠ 10ಲಕ್ಷ ಕೇಸ್ ವರದಿಯಾಗ್ತಿವೆ.
ಚೀನಾದ ಈ ಪರಿಸ್ಥಿತಿಗೆ ಬಿಎಫ್.7 ವೈರಸ್ ಮಾತ್ರ ಕಾರಣವಲ್ಲ. ಒಟ್ಟು ನಾಲ್ಕು ವೇರಿಯಂಟ್ಗಳು ಚೀನಾದ ಇಂದಿನ ಸ್ಥಿತಿಗೆ ಕಾರಣ ಎಂಬ ಸತ್ಯ ಬಯಲಾಗಿದೆ. ಇದು ಇನ್ನು ಮೂರ್ನಾಲ್ಕು ದಿನಗಳಲ್ಲಿ 25 ಲಕ್ಷ ದಾಟಬಹುದು ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ.