ಬೀಜಿಂಗ್ : ಚೀನಾದಲ್ಲಿ ಕೋವಿಡ್ ಆರ್ಭಟ ಮುಂದುವರಿದಿದೆ. ಭಾರೀ ವಿರೋಧದ ನಡುವೆ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವವನ್ನು ಉಳಿಸಲು ಬೇಕಾದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷಿ ಜಿನ್ಪಿಂಗ್ ಸಲಹೆ ಸೂಚನೆ ನೀಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಚೀನಾ ಹೊಸ ಸವಾಲನ್ನು ಎದುರಿಸುತ್ತಿದೆ. ದೇಶೀಯವಾಗಿ ಆರೋಗ್ಯ ಅಭಿಯಾನ ಆರಂಭಿಸಬೇಕು. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
.