Publish Date: Fri, 26 Nov 2021 (19:25 IST)
Updated Date: Fri, 26 Nov 2021 (19:28 IST)
ತಮಿಳುನಾಡಿನಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ತೂತುಕಡಿಯಲ್ಲಿ ವರುಣಾಘಾತಕ್ಕೆ ಸಿಲುಕಿ ಜನರು ನಲುಗಿ ಹೋಗಿದ್ದು, ಮಳೆ ನೀರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 25ಕ್ಕೂ ಹೆಚ್ಚು ಕುಟುಂಬಗಳನ್ನ ರಕ್ಷಣಾ ಪಡೆ ಹಗ್ಗದ ಮೂಲಕ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಇನ್ನೂ, ಶನಿವಾರದವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈಗಾಗಲೇ ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.