Publish Date: Mon, 25 Apr 2022 (12:18 IST)
Updated Date: Mon, 25 Apr 2022 (11:23 IST)
ನವದೆಹಲಿ : ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯ ಇಂಟರ್ನ್ಯಾಶನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ತಿಳಿಸಿದೆ.
ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಿಂತಿರುಗಲು ಸಾಧ್ಯವಾಗದ ಬಗ್ಗೆ ಭಾರತದ ಮನವಿಗಳಿಗೆ ಬೀಜಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನೆರೆಯ ದೇಶವು ಇಲ್ಲಿಯವರೆಗೆ ಅವರನ್ನು ಪ್ರವೇಶಿಸಲು ನಿರಾಕರಿಸಿದೆ. 2020 ರ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಈ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಅಧ್ಯಯನ ತೊರೆದು ಭಾರತಕ್ಕೆ ಬಂದಿದ್ದರು.
ಭಾರತಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಸುತ್ತೋಲೆಯಲ್ಲಿ, ಚೀನಾ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಐಎಟಿಎ ಹೇಳಿದೆ. ಭೂತಾನ್, ಮಾಲ್ಡೀವ್ಸ್, ನೇಪಾಲ್ ಪ್ರಜೆಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.