Select Your Language

Notifications

webdunia
webdunia
webdunia
webdunia

ದಿಢೀರ್ ಕುಸಿತ ಕಂಡ ಟೊಮೇಟೊ ದರ!

webdunia
ಕೋಲಾರ , ಭಾನುವಾರ, 28 ನವೆಂಬರ್ 2021 (10:59 IST)
ಕೋಲಾರ :  ಟೊಮೇಟೊ ದರ ಇದೀಗ ಕುಸಿತ ಕಂಡಿದೆ. ಮೂರ್ನಾಲ್ಕು ದಿನಗಳಿಂದ ಕೋಲಾರ ಮಾರುಕಟ್ಟೆಯಲ್ಲಿ ದರ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ.
ದರ ಏರಿಕೆಯಾಗುತ್ತಿದ್ದಂತೆ ಮಾರುಕಟ್ಟೆಗೆ ಟೊಮೇಟೊ ಆವಕ ಹೆಚ್ಚಾಗಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸ್ಥಳೀಯ ರೈತರು ಹೊಲದಲ್ಲಿದ್ದ ಟೊಮೇಟೊ ಕೊಯ್ಲು ಮಾಡಿ ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಇದರ ಜೊತೆಗೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್ನಿಂದಲೂ ರಾಜ್ಯದ ಮಾರುಕಟ್ಟೆಗೆ ಆವಕವಾಗುತ್ತಿದೆ. ಇದರಿಂದಾಗಿ ದರ ಕುಸಿತವಾಗುತ್ತಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಟೊಮೇಟೊ ಬೆಳೆಗೆ ತೀವ್ರ ಹಾನಿಯಾಗಿತ್ತು. ತೋಟಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದರಿಂದ ಬೆಳೆ ಹಾಳಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಬರುವ ಟೊಮೇಟೊ ಪ್ರಮಾಣದಲ್ಲಿ ಭಾರಿ ಕುಸಿತ ಕಂಡ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತಾಗಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಹಾಕದವರಿಗೆ ಫೈನ್!