Select Your Language

Notifications

webdunia
webdunia
webdunia
webdunia

ಇಂದು NEET ಪರೀಕ್ಷೆ : ಕಿವಿಯೋಲೆ, ಮೂಗುತಿ, ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ

ಇಂದು NEET ಪರೀಕ್ಷೆ : ಕಿವಿಯೋಲೆ, ಮೂಗುತಿ, ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ
ನವದೆಹಲಿ , ಭಾನುವಾರ, 12 ಸೆಪ್ಟಂಬರ್ 2021 (09:59 IST)
ನವದೆಹಲಿ : ದೇಶಾದ್ಯಂತ ಇಂದು 2020-21ನೇ ಸಾಲಿನ ನೀಟ್ ಪರೀಕ್ಷೆ ನಡೆಯಲಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸುಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಪರೀಕ್ಷೆಯನ್ನು ಮಾಡಲಾಗುತ್ತದೆ. ದೇಶದ 201 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಕರ್ನಾಟಕದಲ್ಲಿಯೂ ಪರೀಕ್ಷೆ ನಡೆಯಲಿದ್ದು, ಒಟ್ಟು 9 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.

ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿಯಲ್ಲಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆಯಲ್ಲಿ ಒಟ್ಟು 180 ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಗೆ 4 ಅಂಕಗಳಂತೆ, ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತವಾಗಲಿದೆ.
ನೀಟ್ 2021 : ಹುಡುಗಿಯರಿಗೆ ಡ್ರೆಸ್ ಕೋಡ್
ಕಡಿಮೆ ಹೀಲ್ಸ್ ಚಪ್ಪಲಿಗಳನ್ನು ಅನುಮತಿಸಲಾಗಿದೆ. ಬೂಟುಗಳನ್ನು ಅನುಮತಿಸಲಾಗುವುದಿಲ್ಲಇನ್ನು ಕಿವಿಯೋಲೆಗಳು, ಮೂಗುತಿಗಳು, ಉಂಗುರಗಳು, ಪದಕಗಳು, ನೆಕ್ಲೇಸ್ ಗಳು, ಬ್ರೇಸ್ ಲೆಟ್ ಗಳು ಮತ್ತು ಕಾಲ್ಗೆಜ್ಜೆಗಳಂತಹ ಯಾವುದೇ ರೀತಿಯ ಆಭರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನೀಟ್ 2021 : ಹುಡುಗರಿಗೆ ಡ್ರೆಸ್ ಕೋಡ್
ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್ ಗಳು, ಟಿ-ಶರ್ಟ್ ಗಳು, ಪ್ಯಾಂಟ್ ಗಳು ಮತ್ತು ಸರಳ ಪ್ಯಾಂಟ್ ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಪೂರ್ಣ ತೋಳಿನ ಶರ್ಟ್ ಗಳಿಗೆ ಅನುಮತಿ ಇಲ್ಲ. ಜಿಪ್ ಪಾಕೆಟ್ ಗಳು, ದೊಡ್ಡ ಬಟನ್ ಗಳು ಮತ್ತು ವಿಸ್ತಾರವಾದ ಕಸೂತಿ ಹೊಂದಿರುವ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರೇ ಗಮನಿಸಿ : ಇನ್ಮುಂದೆ `ಟ್ರಾಫಿಕ್ ರೂಲ್ಸ್' ಬ್ರೇಕ್ ಮಾಡಿದ್ರೆ ದುಬಾರಿ ದಂಡ!